Asianet Suvarna News Asianet Suvarna News

ಅಮೆಜಾನ್ Q3 ಲಾಭ ಗಗನಕ್ಕೆ: ಉಳ್ದಿದ್ದೆಲ್ಲಾ ಪಕ್ಕಕ್ಕೆ!

ಅಮೆಜಾನ್ ಮೂರನೇ ತ್ರೈಮಾಸಿಕ ವರದಿ ಪ್ರಕಟ! ಮೂರನೇ ತ್ರೈಮಾಸಿಕದಲ್ಲಿ ಅಮೆಜಾನ್ ಗಳಿಸಿದ ಲಾಭ ಎಷ್ಟು ಗೊತ್ತಾ?! ಅಮೆಜಾನ್ ತ್ರೈಮಾಸಿಕ ಲಾಭದಲ್ಲಿ ಶೇ. 29 ರಷ್ಟು ಏರಿಕೆ! ವಿಶ್ವದ 8 ರಾಷ್ಟ್ರಗಳಲ್ಲಿ ಅಮೆಜಾನ್ ವ್ಯಾಪಾರ ಘಟಕ
 

Amazon reports 56.6 billion US Dollar revenue in Q3
Author
Bengaluru, First Published Oct 26, 2018, 6:22 PM IST

ವಾಷಿಂಗ್ಟನ್(ಅ.26): ವಿಶ್ವದ ಅಗ್ರಗಣ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಕಂಪನಿ ಬರೋಬ್ಬರಿ 56.6  ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ.

ಕಳೆದ ತ್ರೈಮಾಸಿಕ ವರದಿಯಲ್ಲಿ ಕಂಪನಿ 43.7 ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿತ್ತು. ಅದು ಈ ಬಾರಿ ಶೇ. 29 ರಷ್ಟು ಏರಿಕೆ ಕಂಡು 56.6 ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ.

ಅದರಂತೆ ತ್ರೈಮಾಸಿಕ ಅವಧಿಯಲ್ಲಿ ಅಮೆಜಾನ್ 3.7 ಬಿಲಿಯನ್ ಯುಎಸ್ ಡಾಲರ್ ವ್ಯವಹಾರ ನಡೆಸಿದ್ದು, ಕಳೆದ ವರ್ಷ 347 ಮಿಲಿಯನ್ ವ್ಯವಹಾರ ನಡೆಸಿತ್ತು.

ಇನ್ನು ಕಂಪನಿಯ ವಾರ್ಷಿಕ ವ್ಯವಹಾರ 10 ಬಿಲಿಯನ್ ಯುಎಸ್ ಡಾಲರ್ ಗೆ ತಲುಪಿದ್ದು, ವಿಶ್ವದ 8 ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಘಟಕಗಳನ್ನು ಹೊಂದಿದೆ.

ಇದೇ ವೇಳೆ ಅಮೆಜಾನ್ ನಾಲ್ಕನೇ ತ್ರೈಮಾಸಿಕದ ಅಂದಾಜು ವರದಿಯನ್ನೂ ಬಿಡುಗಡೆಗೊಳಿಸಿದ್ದು, 66.5 ಬಿಲಿಯನ್ ಯುಎಸ್ ಡಾರ್ ನಿಂದ 72.5 ಬಿಲಿಯನ್ ಯುಎಸ್ ಡಾಲರ್ ವರೆಗೂ ತಲುಪುವ ಭರವಸೆ ವ್ಯಕ್ತಪಡಿಸಿದೆ.
 

Follow Us:
Download App:
  • android
  • ios