Asianet Suvarna News Asianet Suvarna News

ಅಮೆಜಾನ್ ದಿಢೀರ್ ನಿರ್ಧಾರ: ಸ್ವಿಗಿ, ಜೊಮ್ಯಾಟೋಗೆ ಹರಿಸಿದೆ ಬೆವರ!

ದೀಪಾವಳಿಗೆ ಅಮೆಜಾನ್ ಮಾಡಲಿದೆ ಹೊಸ ಘೋಷಣೆ| ಸ್ವಿಗ್ಗಿ, ಜೊಮ್ಯಾಟೋಗೆ ನಡುಕ ಹುಟ್ಟಿಸಿದ ಅಮೆಜಾನ್ ದಿಢೀರ್ ನಿರ್ಧಾರ| ದೀಪಾವಳಿಗೆ ಅಮೆಜಾನ್ ಆಹಾರ ಪೂರೈಕೆ ಆ್ಯಪ್‌ ಲಾಂಚ್?| ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಫುಡ್ ಆ್ಯಪ್‌ ಬಿಡುಗಡೆ ಮಾಡಲಿದೆಯಾ ಅಮೆಜಾನ್?| ಹೊಟೇಲ್ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿರುವ ಅಮೆಜಾನ್| ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್'ನೊಂದಿಗೆ ಆಹಾರ ಪೂರೈಕೆ ಕ್ಷೇತ್ರಕ್ಕೆ ಕಾಲಿಡಲಿದೆ ಅಮೆಜಾನ್|

Amazon May Introduce Food Delivery App In This Diwali
Author
Bengaluru, First Published Oct 15, 2019, 3:30 PM IST

ನವದೆಹಲಿ(ಅ.15): ಭಾರತದಲ್ಲಿ ಆಹಾರ ಪೂರೈಕೆ ಆ್ಯಪ್‌ ಬಿಡುಗಡೆ ಮಾಡಲು ಅಮೆಜಾನ್ ಸಿದ್ಧತೆ ನಡೆಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಸ್ವಿಗ್ಗಿ, ಜೊಮ್ಯಾಟೋ ಹಾಗೂ ಇತರ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಕಂಪನಿಗಳಲ್ಲಿ ಆತಂಕ ಮನೆ ಮಾಡಿದೆ.

ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್'ಗಳೊಂದಿಗೆ ಅಮೆಜಾನ್ ಈ ದೀಪಾವಳಿಯಲ್ಲಿ ಆಹಾರ ಪೂರೈಕೆ ಆ್ಯಪ್‌ನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಸುದ್ದಿ ಸದ್ಯ ಅಸ್ತಿತ್ವದಲ್ಲಿರುವ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಗಳಿಗೆ ನಡುಕ ಹುಟ್ಟಿಸಿದೆ.

ಅಮೆಜಾನ್ ತನ್ನ ವಿಸ್ತಾರವಾದ ಚಿಲ್ಲರೆ ಆಹಾರ ಪೂರೈಕೆ ಸಂಪರ್ಕ ಜಾಲವನ್ನು ಪ್ರಾಯೋಗಿಕ ಮಾದರಿಯಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹೊಟೇಲ್ ಮಾಲಿಕರೊಂದಿಗೆ ಅಮೆಜಾನ್ ಮಾತುಕತೆ ಆರಂಭಿಸಿದ್ದು, ಅಮೆಜಾನ್ ಮೂಲಕ ರೆಸ್ಟೋರೆಂಟ್ ಮಾಲಿಕರು ಶೇ.6ರಿಂದ ಶೇ.10ರಷ್ಟು ಕಮಿಷನ್ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೊ ಮತ್ತು ಉಬರ್ ಈಟ್ಸ್ ಶೇ.20ರಿಂದ ಶೇ.30ರಷ್ಟು ಕಮಿಷನ್ ಹೇರುತ್ತಿವೆ.

Follow Us:
Download App:
  • android
  • ios