Asianet Suvarna News Asianet Suvarna News

ಸಿಲಿಕಾನ್ ಸಿಟಿಯ ಮಂದಿರ, ಮಸೀದಿಗೆ ಗಂಡಾಂತರ..!

ಸಲಿಕಾನ್ ಸಿಟಿಯ ದೇವಸ್ಥಾನಗಳಿಗೆ ಈಗ ಬಿಬಿಎಂಪಿಯಿಂದ ಗಂಡಾಂತರ ಎದುರಾಗಿದೆ. ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರೋ ದೇವಸ್ಥಾನ, ಮಸೀದಿ, ಚರ್ಚ್‌ಗಳ ತೆರವಿಗೆ ಮುಂದಾಗಿರೋ ಬಿಬಿಎಂಪಿ ಕ್ರಮದಿಂದಾಗಿ ಹಲವು ದೇವಾಲಗಳು ತೆರವಿನ ಭೀತಿ ಎದುರಿಸುತ್ತಿವೆ.

venkateshwara temple in malleshwaram to be vacated by bbmp
Author
Bangalore, First Published Oct 16, 2019, 12:02 PM IST

ಬೆಂಗಳೂರು(ಅ.16): ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ದೇವಸ್ಥಾನಗಳ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಸುಪ್ರೀಂ ಕೋರ್ಟ್‌ನಿಂದ ಈ ರೀತಿಯದೊಂದು ಆದೇಶ ಬಂದಿದ್ದು, ಇದನ್ನು ಬಿಬಿಎಂಪಿ ಕಾರ್ಯರೂಪಕ್ಕೆ ಇಳಿಸುತ್ತಿದೆ.

ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ದೇವಾಲಯ, ಚರ್ಚ್ ಮಸೀದಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಕ್ರಮ ಕೈಗೊಂಡಿದೆ. ಇದರಿಂದ ಸಿಲಿಕಾನ್ ಸಿಟಿಯ ಹಲವು ದೇವಸ್ಥಾನಗಳಿಗೆ ಗಂಡಾಂತರ ಎದುರಾಗಿರುವುದು ವಿಪರ್ಯಾಸ.

ವೆಂಕಟೇಶ್ವರ ದೇವಾಲಯ ತೆರವು:

ಮಾಗಡಿ ರಸ್ತೆ ಸಾಯಿಬಾಬಾ ದೇವಾಲಯ ತೆರವಿನ ನಂತರ ಇದೀಗ ಮಲ್ಲೇಶ್ವರಂ ದೇವಾಲಯಕ್ಕೂ ಕಂಟಕ ಉಂಟಾಗಿದೆ. ಮಲ್ಲೇಶ್ವರಂನ 17ನೇ ಅಡ್ಡ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಾಲಯ ತೆರವಿಗೆ ಬಿಬಿಎಂಪಿ ಮುಂದಾಗಿದೆ.

ಕೋರ್ಟ್ ಆದೇಶ:

2009ರ ನಂತರ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ದೇವಾಲಯ, ಚರ್ಚ್ ಮಸೀದಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಬಿಬಿಎಂಪಿ ಪಾಲಿಸುತ್ತಿದೆ.

ದೇವಸ್ಥಾನ ಬಿಬಿಎಂಪಿ ಜಾಗದಲ್ಲಿದ್ರೆ ತೆರವು ಪಕ್ಕಾ:

ಬಿಬಿಎಂಪಿ ಜಾಗದಲ್ಲಿ ದೇವಸ್ಥಾನ ಇದ್ದರೆ ಅವುಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಲಿದ್ದಾರೆ. ಮುಖ್ಯವಾಗಿ ರಸ್ತೆಯ ತೀರ ಸಮೀಪದಲ್ಲಿ ನಿರ್ಮಿಸಲಾದ ದೇವಸ್ಥಾನಗಳು, ಚರ್ಚ್‌, ಮಸೀದಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಸಂಚಾರ ವ್ಯವಸ್ಥೆಗೆ ತೊಡಕು:

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು, ಮುಖ್ಯವಾಗಿ ರಸ್ತೆ ಬದಿಗಳಲ್ಲಿ ಧಾರ್ಮಿಕ ಮಂದಿರಗಳನ್ನು ನಿರ್ಮಿಸಿರುವುದು, ಸಂಚಾರ ವ್ಯವಸ್ಥೆ, ವಾಹನ ನಿಲುಗಡೆ ಮುಂತಾದ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಧಾರ್ಮಿಕ ಮಂದಿರಗಳಿಗೆ ಭೇಟಿ ನೀಡುವ ಜನರು, ವಾಹನ ದಟ್ಟಣೆ ಇವುಗಳಿಂದ ಸಾರ್ವಜನಿಕವಾಗಿ ತೊಂದರೆ ಉಂಟಾಗುತ್ತಿತ್ತು.

ಬನಶಂಕರಿ ದೇಗುಲಕ್ಕೆ ಲಾರಿ ನುಗ್ಗಿ ಹಾನಿ

ರಸ್ತೆ ಬದಿಯ ದೇವಸ್ಥಾನಗಳ ತೆರವಿಗೆ ಸುಪ್ರೀಂಕೋರ್ಟ್ ಈ ಮುಂಚೆಯೇ ಆದೇಶ ನೀಡಿದ್ದರೂ, ದೇವಸ್ಥಾನ ತೆರವುಗೊಳಿಸಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿರುವ ದೇವಾಲಯ ತೆರವುಗೊಳಿಸುವಂತೆ  ಎಚ್.ಎನ್.ಎ ಪ್ರಸಾದ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಾರ್ವಜನಿಕ ಪ್ರದೇಶಗಳಲ್ಲಿರುವ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಕಮೀಷನರ್‌ಗೆ ಖಡಕ್ ವಾರ್ನಿಂಗ್ ನೀಡಿದೆ. ಹೀಗಾಗಿ ಇದೀಗ ರಸ್ತೆ ಬದಿ ದೇವಸ್ಥಾನಗಳನ್ನು ತೆರವುಗೊಳಿಸಲಾಗ್ತಿದೆ.

ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ

Follow Us:
Download App:
  • android
  • ios