Asianet Suvarna News Asianet Suvarna News

ಮೆಟ್ರೋ ಆದಾಯ ಹೆಚ್ಚಿದರೂ 498 ಕೋಟಿ ನಷ್ಟ

2018-19ನೇ ಸಾಲಿನಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಕಾರ್ಯಾಚರಣೆಯ ಮೂಲಕ .355 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26.34ರಷ್ಟುಆದಾಯ ಹೆಚ್ಚಾಗಿದೆ, ಆದರೆ ನಿರ್ವಹಣೆ, ವೇತನ, ಬಡ್ಡಿ ಪಾವತಿ ಇತ್ಯಾದಿಗಳಿಗೆ ಮಾಡಿದ ವೆಚ್ಚ ಹೆಚ್ಚಾಗಿರುವುದರಿಂದ ಸಂಸ್ಥೆಯ ಒಟ್ಟಾರೆ ನಿವ್ವಳ ನಷ್ಟ.498.41 ಕೋಟಿ ಆಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Namma Metro faces 498 crore loss even after income increase
Author
Bengaluru, First Published Oct 17, 2019, 8:32 AM IST

ಬೆಂಗಳೂರು (ಅ.17): 2018-19ನೇ ಸಾಲಿನಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಕಾರ್ಯಾಚರಣೆಯ ಮೂಲಕ .355 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26.34ರಷ್ಟುಆದಾಯ ಹೆಚ್ಚಾಗಿದೆ, ಆದರೆ ನಿರ್ವಹಣೆ, ವೇತನ, ಬಡ್ಡಿ ಪಾವತಿ ಇತ್ಯಾದಿಗಳಿಗೆ ಮಾಡಿದ ವೆಚ್ಚ ಹೆಚ್ಚಾಗಿರುವುದರಿಂದ ಸಂಸ್ಥೆಯ ಒಟ್ಟಾರೆ ನಿವ್ವಳ ನಷ್ಟ.498.41 ಕೋಟಿ ಆಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಏರ್ಪೋರ್ಟ್ ಗೆ ಮೆಟ್ರೋ ಕಾಮಗಾರಿ ಶೀಘ್ರ ಶುರು

2018-19ರ ವಾಣಿಜ್ಯ ಕಾರ್ಯಾಚರಣೆಯಿಂದ ಸಂಸ್ಥೆಯು .355 ಕೋಟಿ ಫೇರ್‌ಬಾಕ್ಸ್‌ ಆದಾಯ ಗಳಿಸಿದೆ. ಈ ಹಿಂದಿನ ಸಾಲಿನಲ್ಲಿ ಅದು .281 ಕೋಟಿ ಗಳಿಸಿತ್ತು. 2018-19ನೇ ಸಾಲಿನಲ್ಲಿ .83.50 ಕೋಟಿ ಹೆಚ್ಚುವರಿ ಆದಾಯ ದಾಖಲಿಸಿದ್ದು, ಸಾಲದ ಮೇಲಿನ ಬಡ್ಡಿ .112.50 ಕೋಟಿಗಳನ್ನು ಮೆಟ್ರೋ ನಿಗಮ ಕಟ್ಟಿದೆ. ಇದರಿಂದ ನಿಗಮವು .29 ಕೋಟಿಗಳಷ್ಟುಹೆಚ್ಚುವರಿ ಹೊರೆ ಹೊರುವಂತಾಗಿದೆ. 2017-18ರಲ್ಲಿ ಈ ಪ್ರಮಾಣ .37.58 ಕೋಟಿಗಳಷ್ಟಿತ್ತು.

ವರ್ಷದ ಸಂಬಳ, ವಿದ್ಯುತ್‌ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಕಾರ್ಯಾಚರಣೆ ಸಿಬ್ಬಂದಿ ಸಂಬಳ ಮತ್ತು ವೇತನ ಪರಿಷ್ಕರಣೆ, ಆರು ಬೋಗಿಗಳ ರೈಲು ಸಂಚಾರ ಇವೆಲ್ಲವುಗಳಿಂದ ವಾಣಿಜ್ಯ ಸಂಚಾರದ ವೆಚ್ಚದಲ್ಲಿ ಹೆಚ್ಚಳವಾಗಿದೆ. ಬಿಬಿಎಂಪಿ ಹೊರಾಂಗಣ ಜಾಹೀರಾತು ನಿಷೇಧಿಸಿದ್ದರೂ ಶುಲ್ಕ ರಹಿತ ಆದಾಯವು ಶೇ.7.59ರಷ್ಟುಹೆಚ್ಚಾಗಿದೆ. ಹಿಂದಿನ ವರ್ಷದಲ್ಲಿ ಸುಮಾರು .44 ಕೋಟಿಗಳಷ್ಟಿದ್ದದ್ದು, ಪ್ರಸ್ತುತ .47 ಕೋಟಿಗಳಷ್ಟಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಸೌಕರ್ಯ ಕೊರತೆ

ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ ಸಂಸ್ಥೆಗೆ ನಷ್ಟವಾದ .202.27 ಕೋಟಿಗಳಷ್ಟನ್ನು ಮರು ಪಾವತಿಸಿದೆ. ಅದನ್ನು ಇತರೆ ಆದಾಯದಡಿಯಲ್ಲಿ 2017-18ರಲ್ಲಿ ಸ್ವೀಕರಿಸಲಾಗಿದೆ. ಇದು ಹಿಂದಿನ 2013-14ರಿಂದ 2015-16ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದೆ. 2018-19ನೇ ಸಾಲಿನಲ್ಲಿ ಸ್ವೀಕರಿಸಲಾದ .116.39 ಕೋಟಿಗಳ ಮರುಪಾವತಿಯು 2016-17 ಮತ್ತು ಭಾಗಶಃ 2017-18ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದಾಗಿದೆ. ಚಾಲ್ತಿಯಲ್ಲಿರುವ ಲೆಕ್ಕಪತ್ರ ಕ್ರಮದ ಪ್ರಕಾರ ನಗದು ನಷ್ಟದ ಮರುಪಾವತಿಯನ್ನು ಸ್ವೀಕೃತಿಯಾದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ. ಕಾರ್ಯಾಚರಣೆ ಕಾರ್ಯಕ್ಷಮತೆಯಿಂದ ಪ್ರಸ್ತುತ ವರ್ಷದಲ್ಲಿ ನಗದು ನಷ್ಟದಲ್ಲಿ ಕಡಿತ ಉಂಟಾಗಿದೆ. ಆದರೂ ಸಂಸ್ಥೆಯ ನಿವ್ವಳ ನಷ್ಟವು ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಹೆಚ್ಚಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Follow Us:
Download App:
  • android
  • ios