Asianet Suvarna News Asianet Suvarna News

ಮಿಲಿಟರಿ ಸ್ಮಾರಕ ಆವರಣದಲ್ಲಿ ವೀರಗಲ್ಲು ಪ್ರತಿಷ್ಠಾಪನೆ

ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರು ಕೆತ್ತನೆ ಇರುವ ‘ವೀರಗಲ್ಲ’ನ್ನು ಸೋಮವಾರ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. 75 ಅಡಿ ಉದ್ದ, 14 ಮೀಟರ್‌ ಅಗಲ ಇರುವ ಸುಮಾರು 500 ಟನ್‌ ತೂಕದ ಈ ಏಕಶಿಲೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 22,600 ವೀರಯೋಧರ ಹೆಸರುಗಳನ್ನು ಕೆತ್ತಿಸಲಾಗಿದೆ.

veeragallu installed at the National Military Memorial
Author
Bangalore, First Published Nov 5, 2019, 9:25 AM IST

ಬೆಂಗಳೂರು(ನ.05): ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರು ಕೆತ್ತನೆ ಇರುವ ‘ವೀರಗಲ್ಲ’ನ್ನು ಸೋಮವಾರ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

75 ಅಡಿ ಉದ್ದ, 14 ಮೀಟರ್‌ ಅಗಲ ಇರುವ ಸುಮಾರು 500 ಟನ್‌ ತೂಕದ ಈ ಏಕಶಿಲೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 22,600 ವೀರಯೋಧರ ಹೆಸರುಗಳನ್ನು ಕೆತ್ತಿಸಲಾಗಿದೆ. ದೇವನಹಳ್ಳಿಯ ಕೊಯಿರಾ ಗ್ರಾಮದ ಬಳಿ ಶಿಲ್ಪಿಗಳಾದ ಮ್ಯಾಥ್ಯು ಮತ್ತು ಘೋಷ್‌ ಅವರಿಂದ ಈ ವೀರಗಲ್ಲನ್ನು ಕೆತ್ತಿಸಲಾಗಿದೆ.

‘ಕೋರ್ಟಲ್ಲಿ ಸಿ.ಡಿ ಸಾಕ್ಷಿ ಆಗಲ್ಲ ಎಂಬ ಜ್ಞಾನ ಇಲ್ಲ’

ಕಳೆದ ಜೂನ್‌ನಲ್ಲಿ ಈ ವೀರಗಲ್ಲನ್ನು ಟ್ರಕ್‌ನಲ್ಲಿ ಕೊಯಿರಾದಿಂದ ರಾಷ್ಟ್ರೀಯ ಸೈನಿಕ ಸ್ಮಾರಕ ಆವರಣಕ್ಕೆ ಸಾಗಿಸಲಾಗಿತ್ತು. ನಾನಾ ಕಾರಣಗಳಿಂದ ವೀರಗಲ್ಲು ಪ್ರತಿಷ್ಠಾಪನೆ ವಿಳಂಬವಾಗಿತ್ತು. ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದೊಡ್ಡ ಕ್ರೇನ್‌ಗಳ ಸಹಾಯದಿಂದ ಈ ವೀರಗಲ್ಲು ಪ್ರತಿಷ್ಠಾಪಿಸಿದರು.

ಸುಮ್ಮನಹಳ್ಳಿ ಮೇಲ್ಸೇತುವೆ ಗುಂಡಿ ಪರಿಶೀಲನೆಗೆ ಡ್ರೋನ್‌

Follow Us:
Download App:
  • android
  • ios