Asianet Suvarna News Asianet Suvarna News

ನಿದ್ದೆಗೆಡಿಸಿದ ಚಿಂದಿ ಕಳ್ಳರು! ಪೊಲೀಸರ ಮೊರೆ ಹೋದ ಕಮಿಷನರ್

ಅಯ್ಯೋ, ಇದೇನಾಯ್ತು! ನಿನ್ನೆ ಇದ್ದ ಬೊಲ್ಲಾರ್ಡ್ ಇವತ್ತು ಮಾಯವಾಗಿ ಬಿಟ್ಟಿದೆ! ಸದ್ಯ ಕಮಿಷನರ್ ಖುದ್ದು ತಲೆ ಕೆಡಿಸಿಕೊಂಡಿದ್ದಾರೆ ಸರಿ. ಆದರೆ ದುಡ್ಡು ನಾವು-ನೀವು ಕೊಡುವ ತೆರಿಗೆಯದ್ದಲ್ವಾ? ಬನ್ನಿ ಕಮಿಷನರ್‌ಗೆ ಸಹಾಯ ಮಾಡೋಣ...

Roadside Bullards Go Missing BBMP Commissioner Files Complaint
Author
Bengaluru, First Published Nov 6, 2019, 4:45 PM IST

ಬೆಂಗಳೂರು (ನ.06): ಕಳ್ಳತನದ ಪರಮಾವಧಿಯೋ, ಬಡತನದ ಅನಿವಾರ್ಯತೆಯೋ ಅಥವಾ ಸರ್ಕಾರಿ ಸಂಸ್ಥೆಗಳ ಮೇಲೆ ಹಗೆಯೋ ಗೊತ್ತಿಲ್ಲ. ಇಂಥ ಕಳ್ಳತನಕ್ಕೆ ಬಿಬಿಎಂಪಿ ಕಮಿಷನರ್ ಕೂಡಾ ತಲೆಕೆಡಿಸಿಕೊಂಡಿದ್ದಾರೆ.

ಸರ್ಕಾರಿ ಆಸ್ತಿ ಈ ಖದೀಮರಿಗೆ ಸುಲಭ ಟಾರ್ಗೆಟ್. ಗುಜರಿ ಮಾರ್ಕೆಟ್‌ನಲ್ಲಿ ಲೋಹಕ್ಕೆ ಒಳ್ಳೇ ಬೆಲೆ ಇದೆ. ಈ ಲೋಹ ಕಳ್ಳರ ಕಣ್ಣು ಬರೇ ಗುಜರಿಗೆ ಕೊಡಬಹುದಾದ ವಸ್ತುಗಳ ಮೇಲೆ ಇರುತ್ತೆ.

ಹಾಗಾಗಿ, ರಸ್ತೆ ಬದಿ ಇರುವ ಸೈನ್ ಬೋರ್ಡ್ ಗಳು, ರೋಡ್ ರಿಫ್ಲೆಕ್ಟರ್ ಗಳು, ಲೋಹದ ಬೆಂಚುಗಳು, ಕಸದ ಬುಟ್ಟಿಗಳು.... ಹೀಗೆ ಯಾವುದು ಕೂಡಾ ಸುರಕ್ಷಿತವಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಏನ್ಮಾಡಿದ್ದಾರೆ ನೋಡಿ....

ಇದನ್ನೂ ಓದಿ | ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ: 1.29 ಲಕ್ಷ ರು. ದಂಡ...

ಹೌದು, ಬೆಂಗಳೂರಿನ ಟೆಂಡರ್ ಶ್ಯೂರ್ ರಸ್ತೆಗಳ ಫುಟ್‌ಪಾತ್ ಮೇಲೆ ಅಳವಡಿಸಿರುವ ಬೊಲ್ಲಾರ್ಡ್‌ಗಳನ್ನೆ ಕದ್ದೊಯ್ದಿದ್ದಾರೆ. ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ BBMP ಕಮಿಷನರ್, ಪಾಲಿಕೆಯ ಸಾರ್ವತ್ರಿಕ ಆಸ್ತಿ ಹಾಳು ಮಾಡುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರು ಇಂತಹ ಘಟನೆಗಳನ್ನು ಗಮನಿಸಿದಾಗ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ‌ ನೀಡಿ, ಎಂದು ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios