Asianet Suvarna News Asianet Suvarna News

ಇನ್ಮುಂದೆ ಕನ್ನಡ ಬೋರ್ಡ್‌ ಕಡ್ಡಾಯ: ಇಲ್ಲದಿದ್ರೆ ನಿಮ್ ಅಂಗಡಿಯೇ ಇರಲ್ಲ ಜೋಕೆ..!

ಇನ್ಮುಂದೆ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರಬೇಕೆಂದು ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಒಂದು ವೇಳೆ ಬೋರ್ಡ್ ನಲ್ಲಿ ಕನ್ನಡ ಇಲ್ಲಂದ್ರೆ ಟ್ರೇಡ್ ಲೈಸೆನ್ಸ್ ರದ್ದು. 

bbmp commissioner orders  kannada compulsory In Shops board at Bengaluru
Author
Bengaluru, First Published Oct 19, 2019, 9:21 PM IST

ಬೆಂಗಳೂರು, (ಅ.19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಳಕೆಗೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. 

ಇದೇ ನವೆಂಬರ್ 1ರಿಂದ ನಗರದ ಎಲ್ಲಾ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರಬೇಕೆಂದು ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಇಂದು [ಶನಿವಾರ] ಆದೇಶ ಹೊರಡಿಸಿದ್ದಾರೆ.

ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!

ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಉದ್ದಿಮೆಗಳು, ಅಂಗಡಿ ಮುಂತಾದ ವಾಣಿಜ್ಯ ಕಟ್ಟಡಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾಮಫಲಕಗಳಲ್ಲಿ ಕನಿಷ್ಠ ಶೇ 60ರಷ್ಟು ಕನ್ನಡ ಭಾಷೆ  ಇರಬೇಕು. ಅದು ಸ್ಪಷ್ಟವಾಗಿ ಇರುವಂತೆ ಕಡ್ಡಾಯಗೊಳಿಸಲಾಗಿದೆ.  ಒಂದು ವೇಳೆ ಆದೇಶವನ್ನು ಕಡೆಗಣಿಸಿ ಕನ್ನಡವನ್ನು ಆದ್ಯತೆಯ ಮೇರೆಗೆ ಬಳಸದೆ ಇದ್ದರೆ ಅದರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

ಈ ಹಿಂದೆಯೇ ಪರವಾನಗಿ ಪಡೆದಿರುವವರು 2019ರ ನವೆಂಬರ್ 1ರ ಒಳಗೆ ಈ ಆದೇಶಕ್ಕೆ ಅನುಗುಣವಾಗಿ ನಾಮಫಲಕವನ್ನು ಬದಲಿಸಿ ಕನ್ನಡಕ್ಕೆ ಆದ್ಯತೆ ನೀಡುವುದು ಸಹ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಕನ್ನಡ ನಾಮಫಲಕಕ್ಕೆ ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಆದ್ರೆ, ಟ್ರೆಡ್ ಲೈಸೆನ್ಸ್ ರದ್ದು ಮಾಡೋ ಆದೇಶ ಇರಲಿಲ್ಲ.

Follow Us:
Download App:
  • android
  • ios