Asianet Suvarna News Asianet Suvarna News

Fact Check: ಯಲ್ಲಮ್ಮ ದೇವಸ್ಥಾನ ಜಲಾವೃತ ಸುದ್ದಿ ಸುಳ್ಳು

ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವಾಹದಲ್ಲಿ ಮುಳುಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ| ಇದು ಸುಳ್ಳು ಸುದ್ದಿ ಎಂದ ದೇವಸ್ಥಾನದ ಆಡಳಿತ ಮಂಡಳಿ| ಭಕ್ತಾದಿಗಳು ಆತಂಕ ಪಡುವ ಅಗತ್ಯವಿಲ್ಲ|
 

Fake News of Yallamma Temple Drown in Flood
Author
Bengaluru, First Published Oct 25, 2019, 10:27 AM IST

ಬೆಳಗಾವಿ[ಅ.25]: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವಾಹದಲ್ಲಿ ಮುಳುಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಕ್ಟೋಬರ್ 23 ರಂದು ಸಾಯಂಕಾಲ ಸುರಿದ ಭಾರಿ ಮಳೆಯಿಂದಾಗಿ ಯಲ್ಲಮ್ಮ ಗುಡ್ಡದ ಪ್ರದೇಶದಲ್ಲಿ ನೀರಿನ ಪ್ರವಾಹ ಮತ್ತು ವಿಶೇಷವಾಗಿ ಮುಖ್ಯ ದೇವಸ್ಥಾನದಿಂದ 300 ಮೀಟರ ದೂರದಲ್ಲಿರುವ ಪರಶುರಾಮ ಗುಡಿಯ ಬಲ ಭಾಗದಲ್ಲಿರುವ ಎಣ್ಣಿ ಹೊಂಡದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಉಂಟಾಗಿದೆ ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಬಿತ್ತರಿಸಲಾಗುತ್ತಿದ್ದು ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಭಕ್ತಾದಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಕೋಟಾರಗಸ್ತಿ ಅವರು ತಿಳಿಸಿದ್ದಾರೆ. 

ಮಹಾಮಳೆಗೆ ಮುಳುಗಿದ ಸವದತ್ತಿ ಯಲ್ಲಮ್ಮ ದೇವಸ್ಥಾನ: ಕಂಗಾಲಾದ ಭಕ್ತರು

Follow Us:
Download App:
  • android
  • ios