Asianet Suvarna News Asianet Suvarna News

ಹೆಲಿಕಾಪ್ಟರ್‌ಗಾಗಿ ಕಾದು ಕಾದು ಸುಸ್ತಾದ ಸಿಎಂ ಯಡಿಯೂರಪ್ಪ!

ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ನಾಲ್ಕು ಗಂಟೆಗಳ ಕಾಲ ಕಾದ ಯಡಿಯೂರಪ್ಪ| ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ರಾರ‍ಯಲಿ| ಹೆಲಿಕಾಪ್ಟರ್‌ ಮೂಲಕ ಮಹಾರಾಷ್ಟ್ರಕ್ಕೆ ತೆರಳಲಿದ್ದ ಸಿಎಂ| ಬೆಳಗ್ಗೆ 10 ಗಂಟೆಗೆ ಸಾಂಗ್ಲಿ ಜಿಲ್ಲೆಯ ಜತ್ತದಲ್ಲಿ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಪಾಲ್ಗೊಳ್ಳಬೇಕಿತ್ತು| ಹವಾಮಾನ ವೈಪ್ಯರೀತ್ಯ ಮತ್ತು ತಾಂತ್ರಿಕ ತೊಂದರೆಯಿಂದ ಹೆಲಿಕಾಪ್ಟರ್‌ ಬರುವುದು ತಡವಾಯಿತು|  

CM BS Yediyurappa Wait Four Hours For Helicopter in Belagavi
Author
Bengaluru, First Published Oct 17, 2019, 8:49 AM IST

ಬೆಳಗಾವಿ(ಅ.17): ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಬೆಳಗಾವಿಯಲ್ಲಿ ನಾಲ್ಕು ಗಂಟೆಗಳ ಕಾದ ಪ್ರಸಂಗ ನಡೆದಿದೆ. 

ಹೌದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮಂಗಳವಾರ ರಾತ್ರಿ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ 8.30ಕ್ಕೆ ಹೆಲಿಕಾಪ್ಟರ್‌ ಮೂಲಕ ಮಹಾರಾಷ್ಟ್ರಕ್ಕೆ ತೆರಳುವವರಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

10 ಗಂಟೆಗೆ ಸಾಂಗ್ಲಿ ಜಿಲ್ಲೆಯ ಜತ್ತದಲ್ಲಿ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಹವಾಮಾನ ವೈಪ್ಯರೀತ್ಯ ಮತ್ತು ತಾಂತ್ರಿಕ ತೊಂದರೆಯಿಂದ ಹೆಲಿಕಾಪ್ಟರ್‌ ಬರುವುದು ತಡವಾಯಿತು. ಹಾಗಾಗಿ ಯಡಿಯೂರಪ್ಪ ಪ್ರವಾಸಿ ಮಂದಿರದಲ್ಲೇ ಕಾಲ ಕಳೆಯಬೇಕಾಯಿತು. 

ಮಧ್ಯಾಹ್ನ 12.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಮಹಾರಾಷ್ಟ್ರಕ್ಕೆ ಸಿಎಂ ಯಡಿಯೂರಪ್ಪ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್‌ ಸಮಸ್ಯೆಯಾಗಿರುವುದಕ್ಕೆ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿದ ಯಡಿಯೂರಪ್ಪ ಅವರು ಸವದಿ ಅವರನ್ನು ತರಾಟೆಗೆ ತೆಗೆದುಕೊಂಡರು.
 

Follow Us:
Download App:
  • android
  • ios