Asianet Suvarna News Asianet Suvarna News

'ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ'

ಯಡಿಯೂರಪ್ಪ ಈಗಾಗಲೇ ನೇಕಾರರ ಸಾಲ ಮನ್ನಾ ಮಾಡಿದ್ದಾರೆ|ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ| ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ| ಈ ಬಗ್ಗೆ ಯಡಿಯೂರಪ್ಪ ಬಳಿ ಚರ್ಚೆ ಮಾಡುತ್ತೇನೆ ಎಂದ ಸಚಿವ ಬಿ. ಶ್ರೀರಾಮುಲು|  ಅಂದಿನ ಸಿಎಂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೂ ಕ್ಲಾರಿಟಿ ಇಲ್ಲ|  ಸಾಲ ಮನ್ನಾಕ್ಕೆ ಬಜೆಟ್ ನಲ್ಲಿ ಹಣ ನಿಗದಿ‌ ಮಾಡಿಲ್ಲ| ಸಾಲ ಮನ್ನಾ ವಿಚಾರಕ್ಕೆ ಸಂಬಂಧ ಕ್ಯಾಬಿನೆಟ್ ‌ನಲ್ಲಿ ಚರ್ಚಿಸುವೆ|

Minister B Sriramulu Talked About Farmers Loan waiver
Author
Bengaluru, First Published Oct 16, 2019, 12:22 PM IST

ಬಳ್ಳಾರಿ[ಅ.16): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ನೇಕಾರರ ಸಾಲ ಮನ್ನಾ ಮಾಡಿದ್ದಾರೆ.  ಆದ್ರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ. ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಬಳಿ ಚರ್ಚೆ ಮಾಡುತ್ತೇನೆ ಎಂದು ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 

ಇಂದು ನಗರದಲ್ಲಿ ಮಾತನಾಡಿದ ಅವರು , ಅಂದಿನ ಸಿಎಂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೂ ಕ್ಲಾರಿಟಿ ಇಲ್ಲ, ಸಾಲ ಮನ್ನಾಕ್ಕೆ ಬಜೆಟ್ ನಲ್ಲಿ ಹಣ ನಿಗದಿ‌ ಮಾಡಿಲ್ಲ, ಸಾಲ ಮನ್ನಾ ವಿಚಾರಕ್ಕೆ ಸಂಬಂಧ ಕ್ಯಾಬಿನೆಟ್ ‌ನಲ್ಲಿ ಚರ್ಚಿಸುವೆ ಎಂದು ಹೇಳಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಪಚುನಾವಣೆ ನಡೆಯುವ ಹೊಸಪೇಟೆ ಕ್ಷೇತ್ರದಲ್ಲಿ ಬಂಡಾಯ ಕೇಳಿ ಬಂದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗವಿಯಪ್ಪ ಅವರನ್ನ ಮನವೊಲಿಸುವೆ, ಗವಿಯಪ್ಪ ನಮ್ಮ ಮುಖಂಡರಾಗಿದ್ದಾರೆ. ನಮಗೆ ಸರ್ಕಾರ ಇರುವುದು ಮುಖ್ಯವಾಗಿದೆ, ಗವಿಯಪ್ಪ ನನ್ನ ಆತ್ಮೀಯ ಸ್ನೇಹಿತ ಅವರಿಗೆ ಕೊಟ್ಟ ಸ್ಥಾನಮಾನ ಸ್ವೀಕಾರ ಮಾಡಬೇಕು. ವಿಜಯನಗರ ಕ್ಷೇತ್ರದಲ್ಲಿ ನಮಗೆ ಗೆಲುವು ಮುಖ್ಯ ಎಂದು ತಿಳಿಸಿದ್ದಾರೆ. 

ಡಿಸಿಎಂ ವಿಚಾರದಲ್ಲಿ ನನಗೆ ಕ್ಲಾರಿಟಿ ಇಲ್ಲ. ಸರ್ಕಾರದಲ್ಲಿ ನನಗೆ ಕೊಟ್ಟಿರುವ ಕೆಲಸ ಮಾಡುತ್ತಿರುವೆ. ಕೆಲ ಶಾಸಕರು ನಾನು ಡಿಸಿಎಂ ಆಗಬೇಕೆಂದು ಬಯಸಿದ್ದಾರೆ. ಯಾರು ಈ ರೀತಿ ಹೇಳಿಕೆ ನೀಡಬಾರದು. ಪಾರ್ಟಿ ಮುಜುಗರಕ್ಕೀಡಾಗುವಂತೆ ಮಾಡಬಾರದು. ಶಾಸಕರಾದ ಈ ಬಗ್ಗೆ ಸೋಮಶೇಖರ ರೆಡ್ಡಿ  ಹಾಗೂ ಬಸವರಾಜ್ ದಡೇಸೂಗೂರು  ಅವರ ಬಳಿ ನಾನು ಮಾತನಾಡುವೆ ಎಂದು ಹೇಳಿದ್ದಾರೆ. 

ಹಂಪಿ ಉತ್ಸವ ಯಾವುದೇ ಕಾರಣಕ್ಕೂ ನಿಲ್ಲಲ್ಲ

ಹಂಪಿ ಉತ್ಸವ ನಡೆಸುವ ಬಗ್ಗೆ ಕ್ಯಾಬಿನೇಟ್ ನಲ್ಲಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಅತಿವೃಷ್ಠಿ  ಅನಾವೃಷ್ಠಿ‌ ಇರುವ ಕಾರಣ ಸರಳವಾಗಿ ಆಚರಿಸಲು ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ. ಎರಡು ದಿನ ಹಂಪಿ ಉತ್ಸವ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಕೈ ಬಿಡುವ ಪ್ರಶ್ನೆ ಇಲ್ಲ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios