Asianet Suvarna News Asianet Suvarna News

‘ಸಿದ್ದರಾಮಯ್ಯ ಮಾತಲ್ಲಿ ಗಾಂಭೀರ್ಯತೆ ಉಳಿಸಿಕೊಳ್ಳಲಿ’

ಯಡಿಯೂರಪ್ಪ ಅವರ ಆಡಿಯೋ ವೈರಲ್‌ ವಿಚಾರ| ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ|  ಕೈಯಲ್ಲಾಗದವರೂ ಮೈ ಪರಚಿಕೊಂಡಂತೆ ಎನ್ನುವ ಸ್ಥಿತಿ ಸಿದ್ದರಾಮಯ್ಯ ಅವರದ್ದಾಗಿದೆ|

Siddaramaiah Should Maintain Decency
Author
Bengaluru, First Published Nov 6, 2019, 11:09 AM IST

ಬಾಗಲಕೋಟೆ[ನ.6]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ವೈರಲ್‌ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ಮಾಡಿರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ವಸತಿ ಸಚಿವ ವಿ.ಸೋಮಣ್ಣ ಕೈಯಲ್ಲಾಗದವರೂ ಮೈ ಪರಚಿಕೊಂಡಂತೆ ಎನ್ನುವ ಸ್ಥಿತಿ ಅವರದ್ದಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಗುಲಗಾಲ ಜಂಬಗಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾದಂತಹ ಸಿದ್ದರಾಮಯ್ಯನಂತವರು ಮಾತನಾಡುವ ಸಂದರ್ಭದಲ್ಲಿ ಗಾಂಭೀರ್ಯತೆ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕಟೀಲ ಅವರೇ ವೈರಲ್‌ ಮಾಡಿಸಿದ್ದಾರೆ ಅಂತ ಹೇಳುವ ಸಿದ್ದರಾಮಯ್ಯ ಅವರೆನ್ನು ದೇವರಾ, ಅಥವಾ ಶಾಸ್ತ್ರ ಹೇಳ್ತಾರಾ ಎಂದು ಪ್ರಶ್ನಿಸಿದ ಅವರು, ಅಷ್ಟು ದೊಡ್ಡವರಾದವರು ಇಂತಹದನ್ನು ಮಾತನಾಡಬಾರದು ಎಂದರು.

ಯಡಿಯೂರಪ್ಪ ವಿರುದ್ಧ ಏನೇನೋ ಮಾಡಲು ಹೊರಟಿದ್ದಾರೆ. ಆದರೆ ಅವರಿಗೆ ಅನುಭವ ಮತ್ತು ಅದೃಷ್ಟ ಕೈಹಿಡಿದಿದೆ, ಉಪಚುನಾವಣೆ ನಂತರ ಸರ್ಕಾರ ಬೀಳುತ್ತದೆ ಎಂಬ ಸಿದ್ದು ಹೇಳಿಕೆಗೂ ಸಹ ವ್ಯಂಗ್ಯ ಮಾಡಿದ ಸೋಮಣ್ಣ ಅವರ ಹೇಳಿಕೆ ತೋಳ, ಕುರಿ ಮರಿ ಕಥೆ ಕಂಡ್ರಿ ಎಂದು ಕೊಟ್ಟ ಕುದುರೆ ಏರದವನು ವೀರನು ಅಲ್ಲ, ​ಧೀರನು ಅಲ್ಲ ಎಂದು ಉದಾಹರಣೆ ನೀಡಿದರು.

17 ಜನ ಶಾಸಕರು ರಾಜೀನಾಮೆ ನೀಡಿದ್ದರಿಂದ ಈ ಸರ್ಕಾರ ಬಂದಿದೆ. ಆ ಶಾಸಕರು ಮತಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಸ್ವಾಭಿಮಾನದಿಂದ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ನಾವು ಮಂತ್ರಿಗಳಾಗಿದ್ದೇವೆ ಅವರ ಬಗ್ಗೆ ನಮಗೆ ಅಪಾರ ಪ್ರೀತಿ ಗೌರವವಿದೆ ಎಂದರು.

ರಾಜೀವ ಗಾಂಧಿ ​ವಸತಿ ಯೋಜನೆಯಲ್ಲಿ 14 ಲಕ್ಷ ಮನೆಗಳ ಪೈಕಿ 7 ಲಕ್ಷ ಮನೆಗಳು ಮಾತ್ರ ನಿರ್ಮಾಣ ಹಂತದಲ್ಲಿವೆ. ಈ ಕುರಿತು ಕೇಳಿ ಬಂದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ ಇದರಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಪಿಡಿಓಗಳು ಹೆಸರು ಕೇಳಿ ಬಂದಿವೆ ತನಿಖೆ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪಿಡಿಒ ವಿರುದ್ಧ ಗರಂ:

ಮುಧೋಳ ತಾಲೂಕಿನ ನೆರೆ ಪೀಡಿತ ರೂಗಿ ಗ್ರಾಮದಲ್ಲಿ ನೆರೆಯ ಕೊಳಚೆಯನ್ನು ಶುಚಿಗೊಳಿಸಿಲ್ಲ ಎಂದು ಸಂತ್ರಸ್ತರು ಸಚಿವರ ಗಮನಕ್ಕೆ ತಂದಾಗ ಕೆಂಡಾಮಂಡಲರಾದ ಸಚಿವ ಸೋಮಣ್ಣ ಪಿಡಿಒ ವಿರುದ್ಧ ಹರಿಹಾಯ್ದರಲ್ಲದೆ ಪಿಡಿಒಗಳಲ್ಲಾ ಅವರು ರಾಕ್ಷಸರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios