Asianet Suvarna News Asianet Suvarna News

ಯಮಹಾ MT15 ಬಿಡುಗಡೆಗೆ ತಯಾರಿ-ಪೈಪೋಟಿ ಶುರು

ಯಮಹಾ MT15 ನೂತನ ಸ್ಪೋರ್ಟ್ಸ್ ಬೈಕ್ ಬಿಡುಗಡೆಗೆ ತಯಾರಿ ನಡೆಸಿದೆ. ಹೆಚ್ಚು ಆಕರ್ಷಕ ಹಾಗೂ ಬಲಿಷ್ಠ ಬೈಕ್ ಇದೀಗ ಇತರ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ. ನೂತನ ಬೈಕ್ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.

Yamaha MT-15 to launch in India next year
Author
Bengaluru, First Published Oct 31, 2018, 7:12 PM IST

ಬೆಂಗಳೂರು(ಅ.31): ಯಮಹಾ ಮೋಟಾರ್ ಕಂಪೆನಿ ಇದೀಗ ಮತ್ತೊಂದು ಸ್ಪೋರ್ಟ್ಸ್ ಬೈಕ್ ಬಿಡುಗಡೆಗೆ ಸಿದ್ಧವಾಗಿದೆ. 150 ಸಿಸಿ ಸೆಗ್ಮೆಂಟ್ ಬೈಕ್ ಇದೀಗ ಇತರ ಎಲ್ಲಾ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Yamaha MT-15 to launch in India next year

ನೂತನ ಯಮಹಾ MT15 ಬೈಕ್ ಎಂಜಿನ್ ಯಮಹಾ R15 ಎಂಜಿನ್‌ನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ನೂತನ ಯಮಹಾ MT15 ವಿನ್ಯಾಸ ಎಂತವರನ್ನೂ ಆಕರ್ಷಿಸುತ್ತೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ MT15 ಬೈಕ್ ಹೆಚ್ಚು ಶಕ್ತಿಶಾಲಿಯಾಗಿದೆ.

Yamaha MT-15 to launch in India next year

19.3 ಹೆಚ್‌ಪಿ ಪವರ್ ಹಾಗೂ 15nm ಪೀಕ್ ಟಾರ್ಕ್ ಉತ್ಪಾದಿಸುತ್ತೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ನೂತನ MT15 ಬೈಕ್, ಎಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿದೆ.  ನೂತನ ಯಮಹಾ MT15 ಬೈಕ್ ಬೆಲೆ 1.27 ಲಕ್ಷ(ಎಕ್ಸ್ ಶೋ ರೂಂ) ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. 2019ರ ಆರಂಭದಲ್ಲೇ ನೂತನ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

Yamaha MT-15 to launch in India next year

Follow Us:
Download App:
  • android
  • ios