Asianet Suvarna News Asianet Suvarna News

ರಾಂಗ್ ಸೈಡ್ ಡ್ರೈವ್- 35,760 ರೂ ಫೈನ್, ತಪ್ಪೇ ಮಾಡಲ್ಲ ಬಿಟ್ಟು ಬಿಡಿ ಎಂದ ಮಾಲೀಕ

ರಾಂಗ್ ಸೈಡ್ ಮೂಲಕ ಡ್ರೈವ್ ಮಾಡಿಕೊಂಡ ಬಂದ ಕಾರನ್ನು ಅಡ್ಡಗಟ್ಟಿದ ಪೊಲೀಸರು ದಂಡ ವಿಧಿಸಿದ್ದಾರೆ. ಆದರೆ ಪೊಲೀಸರ ಚಲನ್ ನೋಡಿದ ಕಾರು ಮಾಲೀಕ ಕಂಗಾಲಾಗಿದ್ದಾನೆ.

Wrong side driving in Hyderabad police found pending challans of Rs 35760
Author
Bengaluru, First Published Apr 9, 2019, 6:44 PM IST

ಹೈದರಾಬಾದ್(ಏ.09): ಟ್ರಾಫಿಕ್ ಪೊಲೀಸ್ ಇಲ್ಲ ಎಂದು ಸಿಗ್ನಲ್ ಜಂಪ್, ಯು ಟರ್ನ್, ರಾಂಗ್ ಸೈಡ್, ಪಾರ್ಕಿಂಗ್.., ಹೀಗೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಆದರೆ ಎಚ್ಚರ ವಹಿಸಲೇಬೇಕು. ಪೊಲೀಸರು ಇಲ್ಲದಿದ್ದರೂ ಕ್ಯಾಮರ ಕಣ್ಣು ನಿಯಮ ಉಲ್ಲಂಘಿಸೋ ವಾಹನದ ಮೇಲಿರುತ್ತೆ. ಇದೇ ರೀತಿ ರಾಂಗ್ ಸೈಡ್‌ಲ್ಲಿ ಬಂದ ಕಾರು ಮಾಲೀಕನಿಗೆ ಪೊಲೀಸರು ನೀಡಿದ ದಂಡದ ಮೊತ್ತ ನೀಡಿ ಕಾರು ಮಾಲೀಕ ಕಂಗಾಲಾಗಿದ್ದಾನೆ.

ಇದನ್ನೂ ಓದಿ: ಬೈಕ್, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು- ಹಿಡಿಯೋಕೆ ನೀವ್ಯಾರು?

ಹೈದರಾಬಾದ್‌ನಿಂದ 22 ಕಿ.ಮೀ ದೂರದಲ್ಲಿರುವ ಮಿಯೂರ್ ರಸ್ತೆಯಲ್ಲಿ ರಾಂಗ್ ಸೈಡ್ ಮೂಲಕ  ಮಹೀಂದ್ರ XUV500 ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಅಡ್ಡಗಟ್ಟಿದ ಪೊಲೀಸರು ವಾಹನವನ್ನು ನಿಲ್ಲಿಸಿದ್ದಾರೆ. ಇನ್ನು ರಾಂಗ್ ಸೈಡ್ ಡ್ರೈವ್‌ಗೆ ದಂಡ ಹಾಕೋ ಮೊದಲು ಕಾರಿನ ದಾಖಲೆಯನ್ನು ಪರಿಶೀಲಿಸಿದ್ದಾರೆ. ಕಾರಿನ ನಂಬರ್ ಹಾಕಿ ನೋಡಿದಾಗ ಬರೊಬ್ಬರಿ 35,760 ರೂಪಾಯಿ ಬಾಕಿ ಇರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಲಕ್ಸುರಿ ಕಾರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ!

ಸಿಗ್ನಲ್ ಜಂಪ್, ರಾಂಗ್ ಸೈಡ್ ಪಾರ್ಕಿಂಗ್ ಹಾಗೂ ರಾಂಗ್ ಸೈಡ್ ಡ್ರೈವ್ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಪೊಲೀಸರು ನೀಡಿದ ಚಲನ್ ನೋಡಿ ಗಾಬರಿಯಾದ ಕಾರು ಮಾಲೀಕನ ಮುಂದೆ  ದಂಡ ಕಟ್ಟದೆ ಬೇರೆ ಯಾವುದೇ ಮಾರ್ಗವಿರಲಿಲ್ಲ. ಹೀಗಾಗಿ ರಸ್ತೆ ನಿಯಮ ಪಾಲನೆ ದಂಡ ಮಾತ್ರವಲ್ಲ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ.

Follow Us:
Download App:
  • android
  • ios