Asianet Suvarna News Asianet Suvarna News

ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ!

ಹೆಲ್ಮೆಟ್ ಹಾಕಿಲ್ಲ ಅನ್ನೋ  ಕಾರಣಕ್ಕೆ ಪೊಲೀಸರು ವೋಕ್ಸ್‌ವ್ಯಾಗನ್ ಕಾರು ಚಾಲಕನಿಗೆ ದಂಡ ವಿಧಿಸಿದ್ದಾರೆ. ವಿಚಾರಿಸಲು ಹೋದ ಕಾರು ಚಾಲಕ ಕೊನೆಗೂ ದಂಡ ಪಾವತಿಸಿ ವಾಪಾಸ್ಸಾಗಿದ್ದಾರೆ. ಅಷ್ಟಕ್ಕೂ ಈ ತಪ್ಪು ನಡೆದಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

Volkswagen jetta owner fined for without wearing helmet drive
Author
Bengaluru, First Published Feb 22, 2019, 2:28 PM IST

ಆಂಧ್ರಪ್ರದೇಶ(ಫೆ.22): ಸಿಗ್ನಲ್ ಜಂಪ್, ಸೀಟ್ ಬೆಲ್ಟ್, ಓವರ್ ಸ್ಪೀಡ್,  ಪಾರ್ಕಿಂಗ್ ಸೇರಿದಂತೆ ಹಲವು ರಸ್ತೆ ನಿಯಮ ಉಲ್ಲಂಘನೆಗೆ ಕಾರು ಚಾಲಕರಿಗೆ ದಂಡ  ವಿಧಿಸಿರುವುದು ಕೇಳಿದ್ದೇವೆ. ಆದರೆ ಕೆಲ ಬಾರಿ ಪೊಲೀಸರ ಎಡವಟ್ಟಿನಿಂದ ಅರ್ಥವಿಲ್ಲದ ರೀತಿಯಲ್ಲಿ ದಂಡ ವಿಧಿಸಿ ಸುದ್ದಿಯಾಗಿದ್ದಾರೆ.  ಇದೀಗ ವೋಕ್ಸ್‌ವ್ಯಾಗನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿದಿಸಲಾಗಿದೆ. ಪೊಲೀಸರ ನಡೆ ಚಾಲಕನನ್ನ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು

ಆಂಧ್ರಪ್ರದೇಶ ನಿವಾಸಿಗೆ ಪೊಲೀಸರ ದಂಡ ಇನ್ನೂ ಅರ್ಥವಾಗಲೇ ಇಲ್ಲ. ಕಾರಣ ವೋಕ್ಸ್‌ವ್ಯಾಗನ್ ಜೆಟ್ಟಾ ಕಾರು ಮಾಲೀಕನಿಗೆ ರಸ್ತೆ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಡಿಜಿಟಲ್ ಚಲನ್ ರವಾನೆಯಾಗಿತ್ತು. ಚಲನ್ ನೋಡಿ ಚಾಲಕನಿಗೆ ಅಚ್ಚರಿ ಕಾದಿತ್ತು. ಹೆಲ್ಮೆಟ್ ಹಾಕದ ಕಾರಣ 100 ರೂಪಾಯಿ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ 20 ಲಕ್ಷ ರೂ ಡಿಸ್ಕೌಂಟ್!

ಹಲವು ಸಿಗ್ನಲ್‌ ಹಾಗೂ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದರ ಆಧಾರದಲ್ಲಿ ಕಂಟ್ರೋಲ್ ರೂಂನಲ್ಲಿರುವ ಸಿಬ್ಬಂದಿಗಳು ಇ ಚಲನ್ ಜನರೇಟ್ ಮಾಡಿದ್ದಾರೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ. ಇಷ್ಟೇ ಅಲ್ಲ ವೋಕ್ಸ್‌ವ್ಯಾಗನ್ ಕಾರಿನ ನಂಬರ್ ಚೆಕ್ ಮಾಡಿದಾಗ ರಾಂಗ್ ಪಾರ್ಕಿಂಗ್ ವೇಳೆ ನಿಲ್ಲಿಸಿದ ಕಾರಣ ಕಾರಿಗೆ ದಂಡ ವಿಧಿಸಲಾಗಿದೆ. ಆದರೆ ಇ ಚಲನ್ನಲ್ಲಿ ಹೆಲ್ಮೆಟ್ ಹಾಕದ ಕಾರಣ ಎಂದು ತಪ್ಪಾಗಿ ಮುದ್ರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಇಷ್ಟೇ ಅಲ್ಲ, ರಾಂಗ್ ಪಾರ್ಕಿಂಗ್ ದಂಡ ಕಟ್ಟುವಂತೆ ಸೂಚಿಸಿದ್ದಾರೆ.

Follow Us:
Download App:
  • android
  • ios