Asianet Suvarna News Asianet Suvarna News

ಮಾರುತಿ ಡಿಸೈರ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ ಎಮೋ ಕಾರು ಬಿಡುಗಡೆ!

ಮಾರುತಿ ಡಿಸೈರ್, ಹೊಂಡಾ ಅಮೇಜ್ ಕಾರಿಗೆ ಪ್ರತಿಸ್ಪರ್ಧಿಯಾಗಿ ವೋಕ್ಸ್‌ವ್ಯಾಗನ್ ಎಮೋ ಕಾರ್ಪೋರೇಟ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಹಳೆ ಎಮೋ ಕಾರಿಗಿಂತ ಹೆಚ್ಚುವರಿ ಫೀಚರ್ಸ್, ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ ಈ ಕಾರು ಇದೀಗ 5 ಬಣ್ಣಗಳಲ್ಲಿ ಲಭ್ಯವಿದೆ. ಇಲ್ಲಿದೆ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ.

Volkswagen ameo Corporate Edition car launched with more features
Author
Bengaluru, First Published Apr 12, 2019, 8:13 PM IST

ನವದೆಹಲಿ(ಏ.12): ಜರ್ಮನಿ ಮೂಲದ ಕಾರು ಕಂಪನಿ ವೋಕ್ಸ್‌ವ್ಯಾಗನ್ ನೂತನ ಎಮೋ ಕಾರ್ಪೋರೇಟ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಮಾರಿತು ಡಿಸೈರ್ ಹಾಗೂ ಹೊಂಡಾ ಅಮೇಜ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಈ ಕಾರನ್ನು ಬಿಡುಗಡೆ ಮಾಡಿದ್ದು, ಹೆಚ್ಚುವರಿ ಫೀಚರ್ಸ್ ಹಾಗೂ ಆಕರ್ಷಕ ಬಣ್ಣಗಳಲ್ಲಿ ನೂತನ ಎಮೋ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: 2018-19ರಲ್ಲಿ ಗರಿಷ್ಠ ಮಾರಾಟ - ಮಾರುತಿ ಸುಜುಕಿಯದ್ದೇ 'ಕಾರು'ಬಾರು!

ನೂತನ ಎಮೋ ಕಾರ್ಪೋರೇಟ್ ಎಡಿಶನ್  MPI Highline Plus MT ಕಾರಿನ ಬೆಲೆ 6.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು  1.5 TDI Highline Plus MT ವೇರಿಯೆಂಟ್ ಕಾರಿನ ಬೆಲೆ 7.99  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಭಾರತದಲ್ಲಿ  ಲಭ್ಯವಿರು 100BHP ಪವರ್ ಸೆಡಾನ್ ಕಾರುಗಳಲ್ಲಿ ವೋಕ್ಸ್‌ವ್ಯಾಗನ್ ಎಮೋ ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ.

ಇದನ್ನೂ ಓದಿ: ಮಾರುತಿ ಇಕೋ- ABS ಹೊಂದಿದ ಭಾರತದ ಅತ್ಯಂತ ಕಡಿಮೆ ಬೆಲೆಯ 8 ಸೀಟರ್ ಕಾರು!

5 ಬಣ್ಣಗಳಲ್ಲಿ ನೂತನ ಎಮೋ ಕಾರು ಲಭ್ಯವಿದೆ. ವಿಶೇಷ ಅಂದರೆ ಕ್ರೂಸ್ ಕಂಟ್ರೋಲ್ ರೈನ್ ಸೆನ್ಸಿಂಗ್ ವೈಪರ್ಸ್ ಕೂಡ ಈ ಕಾರಿನಲ್ಲಿದೆ. ಇನ್ನು ವೋಕ್ಸ್‌ವ್ಯಾಗನ್ ಎಲ್ಲಾ ಕಾರಿಗೆ 4 ವರ್ಷ/ 1 ಲಕ್ಷ ಕಿ.ಮಿ ವಾರೆಂಟ್ ನೀಡುತ್ತಿದೆ. ಇಷ್ಟೇ ಅಲ್ಲ 3   ಫ್ರೀ ಸರ್ವೀಸ್ ಕೂಡ ನೀಡುತ್ತಿದೆ. ಈ ಮೂಲಕ ಮಾರುತಿ ಕಾರಿಗೆ ಎಲ್ಲಾ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ.

Follow Us:
Download App:
  • android
  • ios