Asianet Suvarna News Asianet Suvarna News

ಟಾಟಾ ಅಲ್ಟ್ರೊಜ್ ಎಲೆಕ್ಟ್ರಿಕ್ ಸೇರಿದಂತೆ 4 ಕಾರು ಅನಾವರಣ!

ಟಾಟಾ ಮೋಟಾರ್ಸ್ 4 ಕಾರು ಅನಾವರಣ ಮಾಡಿದೆ. ಇದರಲ್ಲಿ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ವಿಶೇಷ ಆಕರ್ಷಣೆಯಾಗಿದೆ. ನಾಲ್ಕು ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ಬಲಿಷ್ಛ ಎಂಜಿನ್ ಸಾಮರ್ಥ್ಯ ಹೊಂದಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

Tata motors unveiled 4 cars in Geneva motor show 2019
Author
Bengaluru, First Published Mar 5, 2019, 6:33 PM IST

ಜಿನೆವಾ(ಮಾ.05): ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ವಿದೇಶಿ ಕಾರುಗಳಿಗೆ ಸದ್ಯ ಟಾಟಾ ಮೋಟಾರ್ಸ್ ಭಾರಿ ಪೈಪೋಟಿ ನೀಡುತ್ತಿದೆ. ಹೊಸ ಹೊಸ ಕಾರುಗಳು, ಗರಿಷ್ಠ ಸುರಕ್ಷತೆ ಹಾಗೂ ಕಡಿಮೆ ಬೆಲೆ ಮೂಲಕ ಟಾಟಾ ಕಾರುಗಳು ಭಾರತದಲ್ಲಿ ರಸ್ತೆಗಳಿಯುತ್ತಿದೆ. ಇದೀಗ ಟಾಟಾ ಅಲ್ಟ್ರೋಜ್ ಅನ್ನೋ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಲಾಗಿದೆ.

 

 

ಇದನ್ನೂ ಓದಿ: 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಲಗ್ಗೆ ಇಟ್ಟ ಟಾಟಾ ಮೋಟಾರ್ಸ್!

ಜಿನೆವಾ ಮೋಟಾರ್ ಶೋನಲ್ಲಿ ಟಾಟಾ ಮಾಲೀಕ ರತನ್ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದ್ದಾರೆ. ಇದರ ಜೊತೆಗೆ 7 ಸೀಟಿನ ಹ್ಯಾರಿಗಿಂತ ದೊಡ್ಡದಾದ ಬಝಾರ್ಡ್, ಮಿನಿ SUV ಹಾರ್ನಬಿಲ್ ಹಾಗೂ ಅಲ್ಟ್ರೋಜ್ ಪೆಟ್ರೋಲ್, ಡೀಸೆಲ್ ಕಾರು ಅನಾವರಣ ಮಾಡಲಾಗಿದೆ.

 

 

ಇದನ್ನೂ ಓದಿ: ಬುಲೆಟ್ ಪ್ರೂಫ್,ಬಾಂಬ್ ಪ್ರೊಟೆಕ್ಷನ್ - ರೇಂಜ್ ರೋವರ್ ಕಾರು ಬಿಡುಗಡೆಗೆ ರೆಡಿ!

ಟಾಟಾ ಅಲ್ಟ್ರೋಜ್ ಪೆಟ್ರೋಲ್ ಹಾಗೂ ಡೀಸೆಲ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು 2020 ರಲ್ಲಿ ಭಾರತದ ರಸ್ತೆಗಳಿಯಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ರಿಂದ 200 ಕಿ.ಮೀ ಪ್ರಯಾಣಿಸಲಿದೆ ಎಂದು ಟಾಟಾ ಹೇಳಿದೆ. ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 

 

Follow Us:
Download App:
  • android
  • ios