Asianet Suvarna News Asianet Suvarna News

ಟಾಟಾ ನ್ಯಾನೋ; ಕ್ರಾಂತಿ ಮಾಡಿದ ಸಣ್ಣ ಕಾರನ್ನು ಕೇಳುವವರೇ ಇಲ್ಲ!

2008ರಲ್ಲಿ ಟಾಟಾ ನ್ಯಾನೋ ಕಾರು ಬಿಡುಗಡೆಯಾಯಿತು. ದೇಶದ ಸಣ್ಣ ಕಾರು, ಕಡಿಮೆ ಬೆಲೆಯ ಕಾರು ಎಂದೆಲ್ಲಾ ಬಾರಿ ಜನಪ್ರಿಯಾವಾಗಿದ್ದ ಟಾಟಾ ನ್ಯಾನೋ ಕಾರನ್ನು ಇದೀಗ ಕೇಳುವವರೆ ಇಲ್ಲ. 2019ರಲ್ಲಿ ನ್ಯಾನೋ ಕಾರು ಮಾರಾಟದ ವಿವರ ಹಾಗೂ ನ್ಯಾನೋ ಪರಿಸ್ಥಿತಿಗೆ ಕಾರಣವೇನು? ಇಲ್ಲಿದೆ ವಿವರ.

Tata motors sold only 1 nano car in last 9 months
Author
Bengaluru, First Published Oct 9, 2019, 9:39 PM IST

ನವದೆಹಲಿ(ಅ.09): ಭಾರತದಲ್ಲಿ ಅತಿ ಕಡಿಮೆ ಬೆಲೆ ಹಾಗೂ ಸಣ್ಣ ಕಾರು ಎಂದೇ ಗುರುತಿಸಿಕೊಂಡಿದ್ದ ಟಾಟಾ ನ್ಯಾನೋ ಕಾರು ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆ ಕಳೆಗುಂದಿತು. ಇದೀಗ 2019ರ ಫೆಬ್ರವರಿಯಲ್ಲಿ ಒಂದು ಟಾಟಾ ನ್ಯಾನೋ ಕಾರು ಮಾರಾಟವಾಗಿದೆ ಅಷ್ಟೆ. 2019ರಲ್ಲಿ ಟಾಟಾ ನ್ಯಾನೋ ಒಂದೇ ಒಂದು ಕಾರು ಉತ್ಪಾದನೆ ಮಾಡಿಲ್ಲ. ಫೆಬ್ರವರಿಯಲ್ಲಿ ಮಾರಾಟವಾದ  ಒಂದು ಕಾರು ಹೊರತು ಪಡಿಸಿದರೆ, ಇಲ್ಲೀವರೆಗೆ ಟಾಟಾ ನ್ಯಾನೋ ಕಾರನ್ನು  ಕೇಳುವವರೇ ಇಲ್ಲದಂತಾಗಿದೆ.

ಇದನ್ನೂ ಓದಿ: ಬೆಂಗಳೂರು ಲಾಯರ್ ಹೊಸ ಐಡಿಯಾ; ಕಾರಿನ ಮೇಲೆ ಮಿನಿ ಗಾರ್ಡನ್!

ಟಾಟಾ ನ್ಯಾನೋ ಕಾರು ಸ್ಥಗಿತಗೊಳ್ಳುತ್ತಿದೆ ಅನ್ನೋ ಮಾತು 2017ರಿಂದಲೇ ಕೇಳಿಬರುತ್ತಿದೆ. ಆದರೆ ಕಂಪನಿ ಅಧೀಕೃತವಾಗಿ  ಘೋಷಿಸಿಲ್ಲ. ಇನ್ನು ಸುರಕ್ಷತಾ ಪರೀಕ್ಷೆಯಲ್ಲೂ ಟಾಟಾ ನ್ಯಾನೋ ಪಾಸ್ಸಾಗಿಲ್ಲ. 2008ರಲ್ಲಿ ಟಾಟಾ ನ್ಯಾನೋ ಕಾರು ಬಿಡುಗಡೆಯಾಗಿತ್ತು. ಸಾಮಾನ್ಯ ಜನರ ಕಾರು ಎಂಬ ಟ್ಯಾಗ್ ಲೈನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿತ್ತು.

ಇದನ್ನೂ ಓದಿ: ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!

ಕಳೆದ ವರ್ಷ(2018) ಟಾಟಾ ಮೋಟಾರ್ಸ್ 299 ಕಾರುಗಳ ಮಾರಾಟವಾಗಿತ್ತು. 2020ರಲ್ಲಿ ಟಾಟಾ ನ್ಯಾನೋ ಕಾರು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಟಾಟಾ ನ್ಯಾನೋ ಬೇಡಿಕೆ ಕುಸಿಯಲು ಹಲವು ಕಾರಣಗಳಿವೆ.  1 ಲಕ್ಷ ರೂಪಾಯಿ ಕಾರು ಎಂದಿದ್ದ ಟಾಟಾ ಬಳಿಕ ಕಾರಿನ ಬೆಲೆ ಏರಿಸಿತ್ತು. ಇಷ್ಟೇ ಅಲ್ಲ ಆರಂಭದಲ್ಲೇ ಟಾಟಾ ನ್ಯಾನೋಗೆ ವಿಘ್ನ ಎದುರಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಟಾಟಾ ನ್ಯಾನೋ  ಕಾರು ಉತ್ಪಾದನ ಘಟಕ ಆರಂಭಿಸಬೇಕಿತ್ತು. ಆದರೆ ಭಾರಿ ಪ್ರತಿಭಟನೆಯಿಂದ, ಪ.ಬಂಗಾಳದಿಂದ ಗುಜರಾತ್‌ಗೆ ಸ್ಥಳಾಂತರವಾಯಿತು.

ಟಾಟಾ ನ್ಯಾನೋ ಕಾರು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆಗಳು ಜನರನ್ನು ಬೆಚ್ಚಿ ಬೀಳಿಸಿತ್ತು. ನ್ಯಾನೋ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆಗಳು ಮರುಕಳಿಸ ತೊಡಗಿತು. ಇದು ಕೂಡ ನ್ಯಾನೋ ಕಾರಿನ ಬೇಡಿಕೆ ಕುಸಿಯಲು ಕಾರಣವಾಯಿತು. 

Follow Us:
Download App:
  • android
  • ios