Asianet Suvarna News Asianet Suvarna News

ನಂಬರ್ ಪ್ಲೇಟ್‌ನಲ್ಲಿ ಇಮೋಜಿ ಬಳಸಲು ಅವಕಾಶ!

ವಾಹನದ ನಂಬರ್ ಪ್ಲೇಟ್ ಮೇಲೆ ಇಮೋಜಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಈ ನಿರ್ಧಾರ ಕೈಗೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ. ನೂತನ ನಿಯಮದ ವಿಶೇಷತೆ ಏನು? ಇಲ್ಲಿದೆ ವಿವರ.
 

Queensland allowed to use emoji number plates for vehicle
Author
Bengaluru, First Published Feb 22, 2019, 5:32 PM IST

ಕ್ವೀನ್ಸ್‌ಲೆಂಡ್(ಫೆ.22): ಭಾರತದಲ್ಲಿ ಕಾರಿನ ನಂಬರ್ ಪ್ಲೇಟ್ ಮೇಲೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ವಿವಿದ ಡಿಸೆಗ್ನೇಶನ್ ಬಳಸುವುದು ಸಾಮಾನ್ಯ. ಆದರೆ ಶೀಘ್ರದಲ್ಲೇ ನೂತನ ನಿಯಮ ಜಾರಿಯಾಗುತ್ತಿದೆ. ಈ ನಿಯಮ ಪ್ರಕಾರ ಸರ್ಕಾರಿ ವಾಹನ ಹೊರತು ಪಡಿಸಿ ಇತರ ಯಾವುದೇ ವಾಹನಗಳು ಈ ರೀತಿ ತಮ್ಮ ಹುದ್ದೆ ಹಾಗೂ ಇತರ ಯಾವುದೇ ಡಿಸಿಗ್ನೇಶನ್ ಬಳಸುವಂತಿಲ್ಲ. ಆದರೆ ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ ನಂಬರ್ ಪ್ಲೇಟ್ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ.

ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

ಕ್ವೀನ್ಸ್‌ಲೆಂಡ್‌ನಲ್ಲಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಇಮೋಜಿ ಬಳಸಬಹುದು. ವ್ಯಾಟ್ಸಾಪ್‌ ಹಾಗೂ ಸಾಮಾಜಿ ಜಾಲತಾಣದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಇಮೋಜಿ ಚಿಹ್ನೆಗಳನ್ನ ಕಾರಿನ ನಂಬರ್ ಪ್ಲೇಟ್ ಬಳಸಲು ಅನುಮತಿ ನೀಡಿದೆ. ಇಮೋಜಿ ಬದಲು ಬೇರೇನು ಬಳಸುವಂತಿಲ್ಲ ಎಂದಿದೆ.

Queensland allowed to use emoji number plates for vehicle

ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!

ಮಾರ್ಚ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದೆ. ಈಗಲೇ ಇಮೋಜಿ ನಂಬರ್ ಪ್ಲೇಟ್ ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಕ್ವೀನ್ಸ್‌ಲೆಂಡ್ ಪೊಲೀಸ್ ಇಲಾಖೆ ನೀಡೋ ಅಧಿಕೃತ ಇಮೋಜಿ ನಂಬರ್ ಪ್ಲೇಟ್ ಮಾತ್ರ ಬಳಸಲು ಅವಕಾಶವಿದೆ. ಆದರೆ ಇಮೊಜಿ  ಅನುಮತಿ ನೀಡಲು ಸೂಕ್ತ ಕಾರಣವನ್ನು ಬಹಿರಂಗ ಪಡಿಸಿಲ್ಲ.

Follow Us:
Download App:
  • android
  • ios