Asianet Suvarna News Asianet Suvarna News

ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!

ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರನ್ನು ಬದಲಾಯಿಸಿದ್ದಾರೆ. ಇದೀಗ ಮೋದಿ ಅಧಿಕೃತವಾಗಿ  3 ಕಾರನ್ನು ಬದಲಾಯಿಸಿ 4ನೇ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಪ್ರಧಾನಿ ಬಳಸುತ್ತಿರುವ ನೂತನ ಕಾರು ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ನಿಯಮ. 

PM narendra modi  spotted with a new generation Toyota Land Cruiser car
Author
Bengaluru, First Published Nov 8, 2019, 7:30 PM IST

ನವದೆಹಲಿ(ನ.08): ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ತಮ್ಮ ಕಾರನ್ನು ಬದಲಾಯಿಸಿದ್ದಾರೆ. ಮೋದಿ ಅಧಿಕೃತ ವಾಹನ ಹೈ ಸೆಕ್ಯೂರಿಚಿ BMW 7 ಸೀರಿಸ್ ಕಾರು. ಆದರೆ ಇತ್ತೀಚಿನ ದಿನಗಳಲ್ಲಿ ಮೋದಿ BMW 7 ಸೀರಿಸ್ ಕಾರನ್ನು ಬಳಸುತ್ತಿಲ್ಲ. ಮೊದಲ ಅವಧಿಯಲ್ಲಿ ಗರಿಷ್ಠ ಬಾರಿ BMW 7 ಸೀರಿಸ್ ಕಾರು ಬಳಸಿದ್ದಾರೆ. ಆದರೆ 2ನೇ ಅವಧಿಯಲ್ಲಿ ಮೋದಿ ಹಲವು ಬಾರಿ ಕಾರು ಬದಲಾಯಿಸಿದ್ದಾರೆ. ಇದೀಗ ಮೋದಿ ಶಸ್ತ್ರ ಸಜ್ಜಿತ ನ್ಯೂ ಜನರೇಶನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರು ಬಳಸಿದ್ದಾರೆ.

ಇದನ್ನೂ ಓದಿ: 73ನೇ ಸ್ವಾತಂತ್ರ್ಯ ದಿನಾಚರಣೆ; ಬದಲಾಯಿತು ಪ್ರಧಾನಿ ಮೋದಿ ಕಾರು!

ಮೋದಿ ಮೊದಲ ಬಾರಿಗೆ ಟೊಯೊಟಾ ಲ್ಯಾಂಡ್ ಕ್ರ್ಯೂಸರ್ ಕಾರು ಬಳಸುತ್ತಿಲ್ಲ. 73ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಹಳೇ ಜನರೇಶನ್ ಲ್ಯಾಂಡ್ ಕ್ರ್ಯೂಸರ್ ಕಾರು ಬಳಸಿದ್ದರು. ಇದಾದ ಬಳಿಕ ಹಲವು ಬಾರಿ ಒಲ್ಡ್ ಜನರೇಶನ್ ಲ್ಯಾಂಡ್ ಕ್ರ್ಯೂಸರ್ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮೋದಿ ಶಸ್ತ್ರಸಜ್ಜಿತ ನ್ಯೂ ಜನರೇಶನ್ ಟೊಯೊಟಾ ಹೈ ಸೆಕ್ಯೂರಿಟಿ ಲ್ಯಾಂಡ್ ಕ್ರ್ಯೂಸರ್ ಕಾರು ಬಳಸಿದ್ದಾರೆ.

ಇದನ್ನೂ ಓದಿ: ಕಾರು ಖರೀದಿಸಲು 5 ಸಾವಿರ ರೂ ಸಾಲ ಮಾಡಿದ್ದ ಪ್ರಧಾನ ಮಂತ್ರಿ ಶಾಸ್ತ್ರಿ

ಥಾಯ್ಲೆಂಡ್ ಪ್ರವಾಸದಿಂದ ವಾಪಾಸ್ಸಾದಗ ಪ್ರಧಾನಿ ಮೋದಿ ಹೊಸ ಲ್ಯಾಂಡ್ ಕ್ರ್ಯೂಸರ್ ವಾಹನ ಬಳಕೆ ಮಾಡಿದರು. ಇದೀಗ ಮೋದಿ ಇದೇ ವಾಹನವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ನೂತನ ಲ್ಯಾಂಡ್ ಕ್ರ್ಯೂಸರ್ ಕಾರಿನ ಬೆಲೆ 1.7 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದರ ಆನ್ ರೋಡ್ ಬೆಲೆ 2 ಕೋಟಿ ರೂಪಾಯಿ. ಆದರೆ ಪ್ರಧಾನಿ ಮೋದಿ ಬಳಸೋ ಕಾರಿನ ಬೆಲೆ ಬಹಿರಂಗ ಪಡಿಲ್ಲ.  ಶಸ್ತ್ರಸಜ್ಜಿತ   ಹಾಗೂ ಹೈ ಸೆಕ್ಯೂರಿಟಿ ಫೀಚರ್ಸ್ ಅಳವಡಿಕೆ ಮಾಡುವು ಕಾರಣ, ಈ ಕಾರಿನ ಅಂತಿಮ ಬೆಲೆ ಬಹರಂಗವಾಗಲ್ಲ.

ಇದನ್ನೂ ಓದಿ: ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

ಪ್ರಧಾನಿ ಮೋದಿ ಹಾಗೂ ಕಾರು:
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಚುನಾಯಿತರಾದ  ಬಳಿಕ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಸ್ತ್ರಸಜ್ಜಿತ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ್ದರು. 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಇದೇ ಸ್ಕಾರ್ಪಿಯೋ ಕಾರನ್ನು ಬಳಸಿದ್ದರು. ಗುಜರಾತ್ ಮುಖ್ಯಮಂತ್ರಿ ಅವಧಿಯಲ್ಲೂ ಇದೇ ಸ್ಕಾರ್ಪಿಯೋ ಕಾರನ್ನು ಮೋದಿ ಬಳಸಿದ್ದರು.

ಪ್ರಧಾನಿಯಾದ ಬಳಿಕ ಅಧಿಕೃತ ವಾಹನ ಶಸ್ತ್ರಸಜ್ಜಿತ BMW 7 ಸೀರಿಸ್ ಕಾರನ್ನು ಬಳಕೆ ಮಾಡಿದರು. ಇದರ ಜೊತೆ ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನೆಲ್ ಕಾರು, ಟೊಯೊಟಾ ಒಲ್ಡ್ ಜನರೇಶ್ ಲ್ಯಾಂಡ್ ಕ್ರ್ಯೂಸರ್ ಕಾರು ಬಳಸಿದ್ದಾರೆ. ಇದೀಗ ನ್ಯೂ ಜನರೇಶನ್ ಲ್ಯಾಂಡ್ ಕ್ರ್ಯೂಸರ್ ಕಾರು ಬಳಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸೇನಾ ವಾಹನ ಖ್ಯಾತಿಯ  ಜಿಪ್ಸಿಗೆ ಮಾರುತಿ ಗುಡ್‌ಬೈ!

ಮೋದಿ  ಬಳಸುತ್ತಿರುವ ನೂತನ ಕ್ರ್ಯೂಸರ್ ಕಾರು  4.5-ಲೀಟರ್  V8 ಡೀಸೆಲ್ ಎಂಜಿನ್ ಹೊಂದಿದ್ದು,  262 Bhp ಪವರ್ ಹಾಗೂ  650 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರು  ಶಸ್ತ್ರ ಸಜ್ಜಿತವಾಗಿದ್ದು ಹಲವು ಹೈ ಸೆಕ್ಯೂರಿಟಿ ಫೀಚರ್ಸ್ ಅಳವಡಿಸಲಾಗಿದೆ

ಅಟಲ್ ಬಿಹಾರಿ ವಾಜಪೇಯಿವರೆಗೂ ಭಾರತದ ಪ್ರಧಾನಿಗಲು ಹಿಂದೂಸ್ಥಾನ್ ಅಂಬಾಸಿಡರ್ ಕಾರು ಬಳಸುತ್ತಿದ್ದರು. ಪ್ರಧಾನಿ ಸುರಕ್ಷತೆ ದೃಷ್ಟಿಯಿಂದ ವಾಜಪೇಯಿ ಅವಧಿಯಲ್ಲಿ ಪ್ರಧಾನಿಗೆ BMW ಕಾರನ್ನು ಅಧಿಕೃತವಾಹನವಾಗಿ ನೀಡಲಾಯಿತು. BMW 7 ಸೀರಿಸ್ ಕಾರು ಬಳಸಿದಿ ಭಾರತದ ಮೊದಲ ಪ್ರಧಾನ ಮಂತ್ರಿ ಅನ್ನೋ ಹೆಗ್ಗಳಿಕೆಗೆ ಅಟಲ್ ಬಿಹಾರಿ ವಾಜಪೇಯಿ ಪಾತ್ರರಾಗಿದ್ದಾರೆ. ಬಳಿಕ ಮನ್‌ಮೋಹನ್ ಸಿಂಗ್ ಕೂಡ BMW 7 ಸೀರಿಸ್ ಕಾರು ಬಳಸಿದರು.

ಮೋದಿ ಕಾರು ಬದಲಾವಣೆಗೆ ಕಾರಣ;
ಪ್ರಧಾನಿ ಮೋದಿ ಭದ್ರತೆಯ ದೃಷ್ಟಿಯಿಂದ  BMW 7 ಸೀರಿಸ್ ಕಾರಿನಿಂದ, ಲ್ಯಾಂಡ್ ರೋವರ್, ಬಳಿಕ ಕ್ರ್ಯೂಸರ್ ಹೀಗೆ  ಹಲವು ವಾಹನ ಬಳಕೆ ಮಾಡಿದ್ದಾರೆ. ಅದರಲ್ಲೂ ಮೋದಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ. ಹೀಗಾಗಿ ಮೋದಿ ಒಟ್ಟು ನಾಲ್ಕು ಕಾರಿನ್ನು ಬಳಸುತ್ತಿದ್ದಾರೆ.   ಅವರವರ ಸುರಕ್ಷತೆ ಹಾಗೂ ಭದ್ರತೆಗೆ, ಪ್ರಧಾನಿ ಕಾರ್ಯಾಲಯ ಪ್ರಯಾಣಕ್ಕೆ ಕಾರನ್ನು ಸೂಚಿಸುತ್ತದೆ.  ಪ್ರಯಾಣಕ್ಕೆ  ಕಾರನ್ನು ಬದಲಾಯಿಸುವ ಅವಕಾಶ ಪ್ರಧಾನಿಗಿದೆ. 

 

Follow Us:
Download App:
  • android
  • ios