Asianet Suvarna News Asianet Suvarna News

ಜೀಪ್ ಕಂಪಾಸ್ V/S ಮಹೀಂದ್ರ XUV500: ಜನರ ಆಯ್ಕೆ ಯಾವುದು?

ಮಹೀಂದ್ರ XUV500 ಕಾರು ಹಾಗೂ ಜೀಪ್ ಕಂಪಾಸ್ ಕಾರಿನ ನಡುವೆ ನೇರಾ ನೇರಾ ಸ್ಪರ್ಧೆಯಿದೆ. ಈ ಎರಡು ಕಾರಗಳಲ್ಲಿ ಜನರು ಹೆಚ್ಚು ಆಯ್ಕೆ ಮಾಡುತ್ತಿರುವ ಕಾರು ಯಾವುದು? ಈ ಕಾರಿನ ವಿಶೇಷತೆ ಎನು? ಇಲ್ಲಿದೆ ವಿವರ. 

People choice car Mahindra XUV500 vs Jeep compass Which is the best
Author
Bengaluru, First Published Jan 8, 2019, 11:42 AM IST

ನವದೆಹಲಿ(ಜ.08): ಮಹೀಂದ್ರ XUV500 ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಫಿಯೆಟ್ ಕಂಪೆನಿಯ ಜೀಪ್ ಕಾಂಪಾಸ್ ಕಾರು ಭಾರಿ ಪೈಪೋಟಿ ನೀಡುತ್ತಿದೆ. ವಿನ್ಯಾಸ, ಪವರ್, ಮೈಲೇಜ್ ಸೇರಿದಂತೆ ಹಲವು ವಿಭಾಗಗಳಲ್ಲಿ ಮಹೀಂದ್ರ XUV500 ಹಾಗೂ ಜೀಪ್ ಕಂಪಾಸ್ ನಡುವೆ ನೇರಾ ನೇರ ಸ್ಪರ್ಧೆ ಇದೆ. ಕಳೆದ ಡಿಸೆಂಬರ್‌ನಲ್ಲಿ ಜನರ ಆಯ್ಕೆ ಪ್ರಕಾರ ಜೀಪ್ ಕಂಪಾಸ್ ಮೊದಲ ಸ್ಥಾನ ಪಡೆದಿದೆ.

People choice car Mahindra XUV500 vs Jeep compass Which is the best

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ಡಿಸೆಂಬರ್ 2018ರಲ್ಲಿ ಜೀಪ್ ಕಂಪಾಸ್ 1,150 ಕಾರುಗಳು ಮಾರಾಟವಾಗಿದೆ. ಇನ್ನು ಮಹೀಂದ್ರ XUV500 1,141 ಕಾರುಗಳು ಮಾರಾಟಗೊಂಡಿದೆ. ಈ ಮೂಲಕ 9 ಕಾರುಗಳ ಅಂತರದಲ್ಲಿ ಮಹೀಂದ್ರ XUV500 ಕಾರನ್ನ ಜೀಪ್ ಕಂಪಾಸ್ ಹಿಂದಿಕ್ಕಿದೆ. ಇನ್ನು ಟಾಟಾ ಹೆಕ್ಸಾ 683 ಕಾರು ಮಾರಾಟಾವಾಗೋ ಮೂಲಕ 3ನೇ ಸ್ಥಾನ ಪಡೆದುಕೊಂಡಿದೆ.

People choice car Mahindra XUV500 vs Jeep compass Which is the best

ಇದನ್ನೂ ಓದಿ: ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

ಮಹೀಂದ್ರ XUV500 ಕಾರು 2011ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 7 ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಕ್ರಿಯೆವಾಗಿದೆ. ಆದರೆ ಜೀಪ್ ಕಂಪಾಸ್ ಬಿಡುಗಡೆಯಾಗಿ 2 ವರ್ಷಗಳಾಗಿದೆ. ಇದೀಗ ಜನರು ಜೀಪ್ ಕಂಪಾಸ್ ಕಾರುಗಳತ್ತ ಮುಖಮಾಡಿದ್ದಾರೆ. ಮಹೀಂದ್ರ XUV500 ಕಾರಿಗೆ ಹೋಲಿಸಿದರೆ ಜೀಪ್ ಕಂಪಾಸ್ ಬೆಲೆ ಹೆಚ್ಚು. 

People choice car Mahindra XUV500 vs Jeep compass Which is the best

ಇದನ್ನೂ ಓದಿ: ಮೊದಲ ಫೆರಾರಿ ಕಾರು 25 ವರ್ಷಗಳ ಬಳಿಕ ಹರಾಜು-ಬೆಲೆ 41 ಕೋಟಿಯಿಂದ ಆರಂಭ!

ಮಹೀಂದ್ರ XUV500 ಜೀಪ್ ಕಂಪಾಸ್ ಬೆಲೆ 12.5 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಆದರೆ ಜೀಪ್ ಕಂಪಾಸ್ ಬೆಲೆ 15.44 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಭಾರತದಲ್ಲಿ ಜೀಪ್ ಕಂಪಾಸ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಾಗಿದೆ. 1.4 ಲೀಟರ್ ಟರ್ಬೋಚಾರ್ಜಡ್ ಪೆಟ್ರೋಲ್ ಹಾಗೂ 2 ಲೀಟರ್ ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. 

People choice car Mahindra XUV500 vs Jeep compass Which is the best

Follow Us:
Download App:
  • android
  • ios