Asianet Suvarna News Asianet Suvarna News

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ- 5 ಸಾವಿರ ರೂ.ಗೆ ಬುಕ್ ಮಾಡಿ!

ಈ ವರ್ಷದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುಲಭ ಚಾರ್ಜಿಂಗ್, ಗರಿಷ್ಠ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Okinawa i priase electric sooter launched india
Author
Bengaluru, First Published Jan 27, 2019, 2:35 PM IST

ನವದೆಹಲಿ(ಜ.27): 2019ರ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಜಪಾನ್ ಮೂಲದ ಒಕಿನಾವ ಸಂಸ್ಥೆ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಲಿಥಿಯಂ ಬ್ಯಾಟರಿ ಒಳಗೊಂಡಿರುವ ಒಕಿನಾವ ಐ ಪ್ರೈಸ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Okinawa i priase electric sooter launched india

ಇದನ್ನೂ ಓದಿ: ಶೀಘ್ರದಲ್ಲಿ ಮಹೀಂದ್ರ GenZe ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

2 ರಿಂದ 3 ಗಂಟೆ ಚಾರ್ಜ್ ಮಾಡಿದರೆ 160 ರಿಂದ 180 ಕಿ.ಮೀ ಪ್ರಯಾಣ ಮಾಡಬುಹುದಾಗಿದೆ. ಈ ಸ್ಕೂಟರ್ ಗರಿಷ್ಠ ವೇಗ ಗರಿಷ್ಠ ವೇಗ 77KMPH.ಒಕಿನಾವ ಐ ಪ್ರೈಸ್ ಬೆಲೆ 1.15 ಲಕ್ಷ ರೂಪಾಯಿ. ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್ ಸ್ಕೂಟರ್‌ಗೆ ಹೋಲಿಸಿದರೆ ಒಕಿನಾವ ಆಕರ್ಷಕ ವಿನ್ಯಾಸ ಹೊಂದಿದೆ. 

Okinawa i priase electric sooter launched india

ಇದನ್ನೂ ಓದಿ: ಗ್ರೀನ್ ಸೆಸ್: ಮತ್ತೆ ಹೆಚ್ಚಾಗಲಿದೆ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ !

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್(ABS) ಹೊಂದಿದೆ. ಕಳ್ಳತನ ಅಲರಾಮ್, ಕೀ ಲೆಸ್ ಎಂಟ್ರಿ, ಸೆಂಟ್ರಲ್ ಲಾಂಕಿಂಗ್ ಸೌಲಭ್ಯ ಹೊಂದಿದೆ. ಈ ಸ್ಕೂಟರ್ 5,000 ರೂಪಾಯಿ ನೀಡಿ ಬುಕ್ ಮಾಡಬಹುದು. ಮೊದಲ ಹಂತದಲ್ಲಿ 500 ಸ್ಕೂಟರ್ ಗ್ರಾಹಕರನ್ನ ತಲುಪಲಿದೆ.  ಹೀಗಾಗಿ ಮೊದಲ ಬುಕಿಂಗ್ ಮಾಡುವವರಿಗೆ ಹೆಚ್ಚಿನ ಅದ್ಯತೆ ಸಿಗಲಿದೆ.

Follow Us:
Download App:
  • android
  • ios