Asianet Suvarna News Asianet Suvarna News

2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!

ದುಬಾರಿ ಟ್ರಾಫಿಕ್ ದಂಡದಿಂದ ಪಾರಾಗಲು ಒರಿಜಿನಲ್ ದಾಖಲೆ ಇಟ್ಟುಕೊಳ್ಳಬೇಕು. ಝೆರಾಕ್ಸ್, ಡೂಪ್ಲಿಕೇಟ್ ಆಟ ನಡೆಯುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ 2 ಆ್ಯಪ್‌ಗಳಲ್ಲಿ ಒಂದನ್ನು ಡೌನ್‌ಲೋಡ್ ಮಾಡಿದರೆ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಬಹುದು.
 

New trffic rules 2 mobile apps can avoid traffic penalty
Author
Bengaluru, First Published Sep 23, 2019, 8:52 PM IST

ಬೆಂಗಳೂರು(ಸೆ.23): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು.

ಇದನ್ನೂ ಓದಿ: ಕೊನೆಗೂ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್

ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ  ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ ಒಯ್ಯಲು ಸಾಧ್ಯವೆ. ಹೀಗಾಗಿ  ಮೊಬೈಲ್‌ನಲ್ಲಿ ಡಿಜಿಲಾಕರ್ ಅಥವಾ ಪರಿವಾಹನ ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ದಾಖಲೆಗಳ ಪ್ರತಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ಇದನ್ನು ತೋರಿಸಿದರೆ ಸಾಕು ದುಬಾರಿ ದಂಡದಿಂದ ಪಾರಾಗಬಹುದು.

ಇದನ್ನೂ ಓದಿ: ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಆಧಾರನ್ನು ಲಿಂಕ್ ಮಾಡಬೇಕು. ಬಳಿಕ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್, ಎಮಿಶನ್, ರಿಜಿಸ್ಟ್ರೇಶನ್ ಸೇರಿದಂತೆ ಎಲ್ಲಾ ದಾಖಲೆಗಳು ಅಧೀಕೃತ ಇಲಾಖೆಯಿಂದ ನಿಮ್ಮ ಆ್ಯಪ್ಗೆ ವರ್ಗಾಯಿಸಬೇಕು. ಉದಾಹರಣೆಗೆ ಕರ್ನಾಟಕ ಸಾರಿಗೆ ಇಲಾಖೆ ಆಯ್ಕೆ ಮಾಡಿ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ನಮೂದಿಸಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಆ್ಯಪ್‌ಗೆ ವರ್ಗಾಣವಣೆಯಾಗಲಿದೆ.

ಇದನ್ನೂ ಓದಿ: ಬರೋಬ್ಬರಿ 2 ಲಕ್ಷ ರೂಪಾಯಿ ದಂಡ; ಫೈನ್ ನೋಡಿ ಚಾಲಕ ಕಂಗಾಲು!

ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಪರಿಗಣಿಸುವುದಿಲ್ಲ. ಪೊಲೀಸರು ಕೇಳಿದಾಗ ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್ ‌ನಲ್ಲಿ ಸೇವ್ ಮಾಡಿದ ದಾಖಲೆಗಳನ್ನು ತೋರಿಸಿದರೆ ಸಾಕು. ಇದು ಆಧೀಕೃತ. ಟೆಕ್ನಾಲಜಿ ಆ್ಯಕ್ಟ್ 2000  ಪ್ರಕಾರ ಡಿಜಿಲಾಕರ್ ಅಥವಾ mಪರಿವಾಹನ ಆ್ಯಪ್‌ನಲ್ಲಿ ಸೇವ್ ಮಾಡಿದ ದಾಖಲೆಗಳನ್ನು ಮೂಲ ಪ್ರತಿ ಎಂದು ಪರಿಗಣಿಸಲಾಗುತ್ತೆ ಎಂದು ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. 

Follow Us:
Download App:
  • android
  • ios