Asianet Suvarna News Asianet Suvarna News

ಮಾರುತಿ ಅಲ್ಟೋ K10 ಕಾರು ಬಿಡುಗಡೆ- ಹೆಚ್ಚು ಸುರಕ್ಷತೆ, ಕಡಿಮೆ ಬೆಲೆ!

ಮಾರುತಿ ಅಲ್ಟೋ K10 ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ.ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಮಾರುತಿ ಅಲ್ಟೋ K10 ಇದೀಗ ಗ್ರಾಹಕರನ್ನು ಮೋಡಿ ಮಾಡಲು ಸಜ್ಜಾಗಿದೆ. ನೂತನ ಅಲ್ಟೋ K10 ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
 

Maruti Alto K10 car launched with more safety features
Author
Bengaluru, First Published Apr 12, 2019, 4:19 PM IST

ನವದೆಹಲಿ(ಏ.12): ಮಾರುತಿ ಸುಜುಕಿ ಸಂಸ್ಥೆಯ ನೂತನ ಅಲ್ಟೋ K10 ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಈ ಬಾರಿ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸುರಕ್ಷತೆಗೆ ಆದ್ಯತೆ ನೀಡಿರುವ ಆಲ್ಟೋ ಇದೀಗ ಕಡಿಮೆ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ನೀಡೋ ಕಾರು ಅನ್ನೋ ಹೆಗ್ಗಳಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: FAW ಕಾರು ಕಂಪನಿ ಜೊತೆ ಕೈ ಜೋಡಿಸಿದ Xiaomi-ಬೆಲೆ ಮತ್ತಷ್ಟು ಅಗ್ಗ!

ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ ಕಾರುಗಳು ABS ಬ್ರೇಕ್, ಏರ್‌ಬ್ಯಾಗ್ ಅಳವಡಿಸಿಕೊಳ್ಳಲೇ ಬೇಕು. ಇದು ಎಲ್ಲಾ ವೇರಿಯೆಂಟ್ ವಾಹನಗಳಲ್ಲಿ ಇರಲೇಬೇಕು. ಇದೀಗ ಮಾರುತಿ ಅಲ್ಟೋ K10 ಕಾರು ಹೆಚ್ಚುವರಿ ಫೀಚರ್ಸ್ ಅಳವಡಿಸಿ ಬಿಡುಗಡೆಯಾಗಿದೆ.  ನೂತನ ಅಲ್ಟೋ K10 ಕಾರು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್‌ಪೋರ್ಸ್ ಡಿಸ್ಟ್ರಿಬ್ಯೂಶನ್),ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಸುರಕ್ಷತಾ ಫೀಚರ್ಸ್ ಅಳವಡಿಸಲಾಗಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!

ಹೊಸ ಫೀಚರ್ಸ್‌ನಿಂಗ ಅಲ್ಟೋ K10 ಕಾರಿನ ಬೆಲೆ 25,000 ರೂಪಾಯಿ ಹೆಚ್ಚಳವಾಗಿದೆ. ಸದ್ಯ ನೂತನ ಅಲ್ಟೋ K10 ಕಾರಿನ ಬೆಲೆ 3.65 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಟಾಪ್ ವೇರಿಯೆಂಟ್ ಬೆಲೆ 4.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡೋ ಕಾರು ಅನ್ನೋ ಹಿರಿಮೆಗೆ ಅಲ್ಟೋ K10 ಪಾತ್ರವಾಗಿದೆ. 
 

Follow Us:
Download App:
  • android
  • ios