Asianet Suvarna News Asianet Suvarna News

ಬಜಾಜ್- KTM ಬಿಡುಗಡೆ ಮಾಡುತ್ತಿದೆ 500cc ಬೈಕ್!

ಬಜಾಜ್ ಹಾಗೂ KTM ಸಹಯೋಗದಲ್ಲಿ 500cc ಬೈಕ್ ಬಿಡುಗಡೆಯಾಗಲಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತಿರುವ ಆಸ್ಟ್ರೀಯಾ-ಇಂಡೋ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ. 

KTM and Bajaj will launch 500 cc bike in India to compete Royal enfield
Author
Bengaluru, First Published Apr 13, 2019, 9:01 PM IST

ನವದೆಹಲಿ(ಏ.13): ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪೈಪೋಟಿ ನೀಡಲು ಬಜಾಜ್ ಹಾಗೂ KTM ಸಜ್ಜಾಗಿದೆ. ಆಸ್ಟ್ರಿಯಾದ KTM ಮೋಟರ್‌ಸೈಕಲ್, ಭಾರತದ ಬಜಾಜ್ ಜೊತೆ ಸೇರಿ 500 CC ಬೈಕ್ ಬಿಡುಗಡೆ ಮಾಡುತ್ತಿದೆ. ಇದರ ಜೊತೆಗೆ KTM 790 CC ಡ್ಯೂಕ್ ಬೈಕ್ ಕೂಡ ಬಿಡುಗಡೆ ಮಾಡಲು KTM ಮುಂದಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಬ್ರಿಟೀಷ್ ಬೈಕ್- ಬೆಲೆ ಎಷ್ಟು?

ಕಳೆದ ವರ್ಷ ರಾಯಲ್‌ ಎನ್‌ಫೀಲ್ಡ್ ಟ್ವಿನ್ ಸಿಲಿಂಡರ್ ಬೈಕ್‌ಗಳಾದ ಕಾಂಟಿನೆಂಟಲ್  GT 650 ಹಾಗೂ ಇಂಟರ್‌ಸೆಪ್ಟರ್ 650  ಬಿಡುಗಡೆ ಮಾಡಿದೆ. ಇದು ಯಶಸ್ಸು ಕಂಡಿದೆ. ಟ್ವಿನ್ ಸಿಲಿಂಡರ್ ಬೈಕ್ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಬಜಾಜ್ KTM ಕೂಡ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ.

ಇದನ್ನೂ ಓದಿ: KTM ಡ್ಯೂಕ್ 125 ಪ್ರತಿಸ್ಪರ್ಧಿ- ಬಜಾಜ್ ಪಲ್ಸಾರ್ 125NS ಶೀಘ್ರದಲ್ಲಿ!

KTM ಹಾಗೂ ಬಜಾಜ್  ಸಹಯೋಗದಲ್ಲಿ 500cc ಟ್ವಿನ್ ಸಿಲಿಂಡರ್ ಬೈಕ್ ಬಿಡುಗಡೆಯಾಗಲಿದೆ. KTM ಬೈಕ್ ಇದಾಗಿದ್ದು, ಬಜಾಜ್ ಬೈಕ್ ಘಟಕದಲ್ಲಿ ಈ ಬೈಕ್ ಉತ್ಪಾದನೆಯಾಗಲಿದೆ. ಇಷ್ಟೇ ಅಲ್ಲ ವಿದೇಶಗಳಿಗೂ ಭಾರತದಿಂದಲೇ ರಫ್ತಾಗಲಿದೆ. ಭಾರತದಲ್ಲಿ  KTM ಬೈಕ್ ಹೆಚ್ಚು ಪ್ರಸಿದ್ಧಿಯಾಗಿದೆ.  Duke 125, Duke 200, Duke 250, Duke 390 ಬೈಕ್ ಯುವ ಜನತೆಯನ್ನು ಆಕರ್ಷಿಸಿದೆ. ಇದೀಗ ಟ್ವಿನ್ ಸಿಲಿಂಡರ್ 500 ಸಿಸಿ ಬೈಕ್ ಕೂಡ ಹೊಸ ಸಂಚಲನ ಮೂಡಿಸಲಿದೆ ಎಂದು ಕಂಪನಿ ಹೇಳಿದೆ. ಆದರೆ ಇದರ ಬೆಲೆ ಕುರಿತು ಯಾವುದೇ ಸೂಚನೆ ನೀಡಿಲ್ಲ.

Follow Us:
Download App:
  • android
  • ios