Asianet Suvarna News Asianet Suvarna News

ಹೈದರಾಬಾದ್, ಶಬರಿಮಲೆ, ಲಕ್ನೋದಲ್ಲಿ ಎಲೆಕ್ಟ್ರಿಕ್ ಬಸ್ - ಬೆಂಗಳೂರಲ್ಲಿ ಯಾವಾಗ?

ಭಾರತದ ಬಹುತೇಕ ನಗರಗಳಲ್ಲಿ ಈಗ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಳ್ಳುತ್ತಿದೆ. ದೆಹಲಿ, ಶಬರಿಮಲೆ, ಹೈದರಾಬಾದ್ ಬಳಿಕ ಇದೀಗ ಲಕ್ನೋದಲ್ಲಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಳ್ಳುತ್ತಿದೆ. ಹಾಗಾದರೆ ಬೆಂಗಳೂರಿನಲ್ಲಿ ಯಾವಾಗ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
 

Hyderbad Sabarimala Lucknow started electric bus next service Bengaluru
Author
Bengaluru, First Published Feb 12, 2019, 3:48 PM IST

ಲಕ್ನೋ(ಫೆ.12): ಮಾಲಿನ್ಯದಿಂದ ಮುಕ್ತಿ ಪಡೆಯಲು ವಿಶ್ವವೇ ಇದೀಗ ಎಲೆಕ್ಟ್ರಿಕ್ ಬಸ್‌ನತ್ತ ಚಿತ್ತ ಹರಿಸಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈಗಾಗಲೇ ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಿದೆ. ಇದೀಗ ಲಕ್ನೋ ನರದಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲಿದೆ.

 

 

ಇದನ್ನೂ ಓದಿ: ಪೊಲೀಸರಿಗೂ ಹೆಲ್ಮೆಟ್ ಕಡ್ಡಾಯ - ತಪ್ಪಿದರೆ ಹೆಚ್ಚುವರಿ ದಂಡ!

ಲಕ್ನೋ ನಗರಕ್ಕೆ ಟಾಟಾ ಮೋಟಾರ್ಸ್ 40 ಎಲೆಕ್ಟ್ರಿಕ್ ಬಸ್ ವಿತರಣೆ ಮಾಡಲಿದೆ. ಮೊದಲ ಹಂತದಲ್ಲಿ ಕೆಲ ಬಸ್ ವಿತರಣೆ ಮಾಡಿರುವ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಉಳಿದ ಬಸ್ ನೀಡಲಿದೆ. ವಿಶೇಷ ಅಂದರೆ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ಉತ್ಪಾದನೆಯಾಗಿದ್ದು ನಮ್ಮ ಧಾರವಾಡದಲ್ಲಿ. ಟಾಟಾ ಮಾರ್ಕೋಪೊಲೋ ಮೋಟಾರ್ ಘಟಕ ಧಾರವಾಡದಲ್ಲಿ ನೂತನ ಎಲೆಕ್ಟ್ರಿಕ್  ಬಸ್ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ: ಕಿರಿಕ್ ಪಾರ್ಟಿ, ಉಪ್ಪಿ-2, ಅಣ್ಣಾ ಬಾಂಡ್, ರಾಜರಥದ ಹಿಂದಿನ ಶಕ್ತಿ ಕಣ್ಮರೆ

ಲಕ್ನೋ ನಗರಕ್ಕೆ ಎಲೆಕ್ಟ್ರಿಕ್ ಬಸ್ ಪೂರೈಸಿದ ಬಳಿಕ ಟಾಟಾ ಮೋಟಾರ್ಸ್ ಬೆಂಗಳೂರಿನತ್ತ ಮುಖಮಾಡೋ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲೂ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಲಿದೆ. ದೆಹಲಿ, ಶಬರಿಮಲೆ, ಹೈದರಾಬಾದ್‌ಗಳಲ್ಲಿ ಒಲೆಕ್ಟ್ರಾ BYD ಎಲೆಕ್ಟ್ರಿಕ್ ಬಸ್ ನೀಡೋ ಜವಾಬ್ದಾರಿ ಹೊತ್ತುಕೊಂಡಿದೆ.
 

Follow Us:
Download App:
  • android
  • ios