Asianet Suvarna News Asianet Suvarna News

ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!

ಫ್ಯಾಮಿಲಿ ಪ್ಲಾನಿಂಗ್ ಇದೀಗ ವಾಹನಕ್ಕೂ ಅನ್ವಯವಾಗೋ ಕಾಲ ದೂರವಿಲ್ಲ. ಒರ್ವ ವ್ಯಕ್ತಿ ಎಷ್ಟು ಕಾರು ಇಟ್ಟುಕೊಳ್ಳಬಹುದು? ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಹೊಸ ವ್ಯಾಖ್ಯಾನ ನೀಡಿದ್ದಾರೆ. ನಾವಿಬ್ಬರು ನಮಗಿಬ್ಬರು ಪಾಲಿಸಿ ಇದೀಗ  ನೀವು ಖರೀದಿಸೋ ಕಾರಿಗೂ ಅನ್ವಯವಾಗಲಿದೆ.

hum do hamare do family planing need to implement in vehicle sector says supreme court justice
Author
Bengaluru, First Published Apr 1, 2019, 7:05 PM IST

ನವದೆಹಲಿ(ಏ.01): ಭಾರತದಲ್ಲಿ ಹೆಚ್ಚುತ್ತಿರವ ಜನಸಂಖ್ಯೆಯನ್ನು ನಿಯಂತ್ರಿಸಲು ನಾವಿಬ್ಬರು ನಮಗಿಬ್ಬರು, ಆರತಿಗೊಂದು, ಕೀರ್ತಿಗೊಂದು ಅನ್ನೋ  ಸ್ಲೋಗನ್ ಹೆಚ್ಚು ಪ್ರಸಿದ್ಧಿಯಾಗಿದೆ. ಇದೀಗ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ಲಾನಿಂಗ್ ಅವಶ್ಯಕ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!

ಕುಟುಂಬಕ್ಕೆ ಕಾರು ಅವಶ್ಯಕ. ಅದನ್ನು ಖರೀದಿಸುವ ಹಕ್ಕು ಅವರಿಗಿದೆ. ಆದರೆ ಒರ್ವ 5, 6 ಅಥವ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ. ಖಾಸಗಿ ಬಳಕೆಗಾಗಿ ಹಲವು ಕಾರುಗಳನ್ನು ಹೊಂದಿದ್ದಾರೆ. ಇದು ಅಪಯಾಕಾರಿ. ಪರಿಸರಕ್ಕೂ ಮಾರಕ. ಹೀಗಾಗಿ ಈ ಕುರಿತು ಕಟ್ಟು ನಿಟ್ಟಿನ ನಿಯಮ ಅಗತ್ಯ. ನಾವಿಬ್ಬರು ನಮಗಿಬ್ಬರು ಪಾಲಿಸಿ ಕಾರಿನಲ್ಲೂ ಬೇಕು ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!

ಭಾರತದಲ್ಲಿ ಪ್ರತಿ ದಿನ ಸರಿಸುಮಾರು 32 ಲಕ್ಷ ವಾಹನಗಳು ಪ್ರತಿ ದಿನ ಸೇರ್ಪಡೆಯಾಗುತ್ತಿದೆ. ನಗರ ಪ್ರದೇಶಗಳು ಮಾತ್ರವಲ್ಲ, ಇದೀಗ ಹಳ್ಳಿಹಳ್ಳಿಗಳ ರಸ್ತೆಗಳು ಕೂಡ ವಾಹನಗಳಿಂದು ತುಂಬಿ ಹೋಗಿದೆ. ಮಾಲಿನ್ಯ, ಇಂಧನ ದುಬಾರಿ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ವಾಹನಗಳು ಮೂಲ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಅಗತ್ಯ ಎಂದಿದ್ದಾರೆ. ನ್ಯಾಯಾಧೀಶ ಅರುಣ್ ಮಿಶ್ರಾ ಹಾಗೂ ದೀಪಕ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ಕಾನೂನಾಗಿ ಜಾರಿಯಾದರೆ ಒಳಿತು.

Follow Us:
Download App:
  • android
  • ios