Asianet Suvarna News Asianet Suvarna News

ನೀರವ್ ಮೋದಿಗೆ ಮತ್ತೊಂದು ಶಾಕ್- 11 ಕಾರು ಹರಾಜಿಗೆ!

ಲಂಡನ್‍‌ನಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ಉದ್ಯಮಿ ನೀರವ್ ಮೋದಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನೀರವ್ ಮೋದಿಯ 11 ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹರಾಜಿಗೆ ಹಾಕಲಿದ್ದಾರೆ.

Enforcement Directorate will auction Nirv modi 11 laxury cars
Author
Bengaluru, First Published Mar 22, 2019, 6:08 PM IST

ಮುಂಬೈ(ಮಾ.22): ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಂಚಿಸಿ ಲಂಡನ್‌ಗೆ ಪರಾರಿಯಾಗಿದ್ದ ಭಾರತೀಯ ಉದ್ಯಮಿ ನಿರೀವ್ ಮೋದಿ ಬಂಧನಕ್ಕೊಳಗಾಗಿದ್ದಾರೆ. ಇದೀಗ ನೀರವ್ ಮೋದಿ ಬ್ಯಾಂಕ್‌ಗೆ ವಂಚಿಸಲಾಗಿರುವ 13,000 ಕೋಟಿ ರೂಪಾಯಿ ವಸೂಲಿಗೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ವಿಜಯ್ ಮಲ್ಯ to ನೀರವ್ ಮೋದಿ: ಭಾರತದಲ್ಲಿ ಬಿಟ್ಟು ಹೋದ ಕಾರುಗಳಿವು!

ED ಅಧಿಕಾರಿಗಳು ಇದೀಗ ನೀರವ್ ಮೋದಿ 11 ಕಾರುಗಳನ್ನು ಹರಾಜಿಗೆ ಹಾಕಲು ಅನುಮತಿ ಪಡೆದಿದ್ದಾರೆ. ಮುಂಬೈ ನ್ಯಾಯಾಲಯದಿಂದ ಅನುಮತಿ ಪಡೆದಿರುವ ED ಅಧಿಕಾರಿಗಳು ನೀರವ್ ಮೋದಿಯ ದುಬಾರಿ ಕಾರುಗಳನ್ನು ಹರಾಜಿಗೆ ಹಾಕಲಿದ್ದಾರೆ. ಮಾ.26 ರಂದು ನೀರವ್ ಮೋದಿಯ ಕಾರುಗಳು ಹರಾಜಾಗಲಿದೆ.

ನೀರವ್ ಮೋದಿ ಕಾರುಗಳು: 
ರೋಲ್ಸ್ ರಾಯ್ಸ್ ಘೋಸ್ಟ್, ಪೋರ್ಶೆ ಪನಾಮೆರ, ಮರ್ಸಡೀಸ್ ಬೆಂಝ್ GLS 350 CDI, ಮರ್ಸಡೀಸ್ ಬೆಂಝ್  CLS-Class, ಟೊಯೊಟಾ ಫಾರ್ಚುನರ್ , ಹೊಂಡಾ CR-V,   
ಟೊಯೊಟಾ ಇನೋವಾ , ಮರ್ಸಡೀಸ್ ಬೆಂಝ್ ಸಿ ಕ್ಲಾಸ್ ಸೇರಿದಂತೆ 11 ಕಾರುಗಳನ್ನು ಪೊಲೀಸರು ಹರಾಜು ಮಾಡಲಿದ್ದಾರೆ. 11 ಕಾರುಗಳ ಜೊತೆಗೆ 173 ಪೈಟಿಂಗ್ಸ್ ಕೂಡ ಹರಾಜಾಗಲಿದೆ. ಹರಾಜಿನ ಒಟ್ಟು ಮೌಲ್ಯ ಸರಿಸುಮಾರು 57.72 ಕೋಟಿ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. 
 

Follow Us:
Download App:
  • android
  • ios