Asianet Suvarna News Asianet Suvarna News

ಬಜಾಜ್ ಪಲ್ಸಾರ್ 180F ಬಿಡುಗಡೆ - ಪೈಪೋಟಿ ಶುರು!

ಬಜಾಜ್ ಪಲ್ಸಾರ್ 180F ಬೈಕ್ ಬಿಡುಗಡೆಯಾಗಿದೆ. ವಿನ್ಯಾಸದಲ್ಲಿ ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ 

Bajaj launch pulsar 180f bike launched with low price
Author
Bengaluru, First Published Mar 15, 2019, 6:41 PM IST

ನವದೆಹಲಿ(ಮಾ.15): ಬಜಾಜ್ ಪಲ್ಸಾರ್ 180F ಬಿಡುಗಡೆಯಾಗಿದೆ. 220F ಶೈಲಿಯಲ್ಲಿರುವ ನೂತನ ಬೈಕ್ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಈ ಮೂಲಕ ಟಿವಿಎಸ್ ಅಪಾಚೆ, ಯಮಹಾ ಸೇರಿದಂತೆ ಇತರ ಬೈಕ್‌ಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ.

ಇದನ್ನೂ ಓದಿ: ಶೀಘ್ರದಲ್ಲಿ ಎಪ್ರಿಲಿಯಾ 160cc ಮ್ಯಾಕ್ಸಿ ಸ್ಕೂಟರ್ ಬಿಡುಗಡೆ!

ನೂತನ ಬಜಾಜ್ ಪಲ್ಸಾರ್ 180F ನಿಯಾನ್ ಎಡಿಶನ್ ಬೆಲೆ 87,450 ರೂಪಾಯಿ(ಎಕ್ಸ್ ಶೋ ರೂಂ). ಪಲ್ಸಾರ್ 180 ಎಂಜಿನ್ ನೂತನ ಬೈಕ್‌ನಲ್ಲೂ ಬಳಸಲಾಗಿದೆ.  178.6 ಸಿಸಿ, 2-ವೇಲ್ವ್, ಏರ್‌ಕೂಲ್ಡ್ DTS-i ಎಂಜಿನ್,  17 BHP ಪವರ್  14.2 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಯಮಹಾ MT-15 ಬೈಕ್!

ಫ್ರಂಟ್ 260 mm ಡಿಸ್ಕ್ ಬ್ರೇಕ್ ಹಾಗೂ ರೇರ್ 230 mm ಡಿಸ್ಕ್ ಬ್ರೇಕ್ ಹೊಂದಿದೆ. ಶೀಘ್ರದಲ್ಲೇ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಪ್‌ಗ್ರೇಡ್ ಆಗಲಿದೆ. ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ 125cc ಎಂಜಿನ್‌ಗಿಂತ ಹೆಚ್ಚಿನ ಎಲ್ಲಾ ಬೈಕ್‌ಗಳು ABS ಬ್ರೇಕ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. 

Follow Us:
Download App:
  • android
  • ios