Asianet Suvarna News Asianet Suvarna News

ವಾರ ಭವಿಷ್ಯ: ಈ ರಾಶಿಯವರು ಏನೇ ಕೆಲಸ ಮಾಡಿದ್ರು ಗೆಲುವು ಖಚಿತ!

ಈ ವಾರ ನಿಮ್ಮ ಭವಿಷ್ಯ ಹೇಗಿದೆ? ಸಮಸ್ಯೆ ನಿವಾರಣೆಗೆ ಏನು ಮಾಡಬೇಕು? ತಿಳಿದುಕೊಳ್ಳಿ ಈ ವಾರದ ರಾಶಿ ಭವಿಷ್ಯದಲ್ಲಿ

weekly horoscope 24th february 2019
Author
Bangalore, First Published Feb 24, 2019, 7:43 AM IST

ಮೇಷ: ನಾನು ಹೇಳಿದ್ದೇ ನಡೀಬೇಕು ಅನ್ನೋ ಮನಸ್ಥಿತಿ ನಿಮ್ಮದು. ಅದರಿಂದಲೇ ಸಮಸ್ಯೆ ಜಾಸ್ತಿ. ಆದರೆ ಈ ವಾರ ಕೈ ಹಾಕಿದ ಕೆಲಸಗಳೆಲ್ಲ ಸುಲಭವಾಗಿ ಮುಗಿಯುತ್ತವೆ. ಗೊಂದಲ ಕಡಿಮೆಯಾಗಬೇಕಾದರೆ, ಕೊಂಚ ಸಮಯ ಏಕಾಂತದಲ್ಲಿ ಯೋಚಿಸಿ, ನನಗೀಗ ಏನು ಬೇಕು ಅಂತ ಚಿಂತಿಸಿ ಮುನ್ನಡೆಯಿರಿ. ಶುಭವಾಗುವುದು.

ವೃಷಭ: ನಿಮ್ಮನ್ನೀಗ ಹಿಡಿಯುವವರೇ ಇಲ್ಲ. ಕೈ ಹಾಕಿದ್ದರಲ್ಲೆಲ್ಲ ಗೆಲುವು ಗ್ಯಾರಂಟಿ. ಹೆಚ್ಚುಕಮ್ಮಿ ಮೇ ವರೆಗೂ ಈ ಗೆಲುವಿನ ಓಟ ಮುಂದುವರಿಯಬಹುದು. ಹಾಗಾಗಿ ಮಹತ್ವದ ಕಾರ್ಯ ಕೈಗೊಳ್ಳಲು ಸಕಾಲ. ದಾಂಪತ್ಯವೂ ರಸವತ್ತಾಗಿರುತ್ತದೆ. ಹ್ಯಾಪ್ ಮೋರೆ ಹಾಕೋದು ಬಿಟ್ಟು ಹ್ಯಾಪಿಯಾಗಿರಿ.

ಮಿಥುನ: ಪ್ರೇಮ ನಿವೇದನೆ ಮಾಡ್ಬೇಕು ಅಂತ ಅಂದ್ಕೊಂಡ್ರಿದ್ರೆ ಈ ವಾರ ತಕ್ಕುದಲ್ಲ. ಏಳುಬೀಳುಗಳು ಹೆಚ್ಚಿರುವ ವಾರ ಇದು. ಶತ್ರುಗಳ ಹತ್ತಿರವೂ ಸುಳಿಯಬೇಡಿ. ಆರ್ಥಿಕವಾಗಿ ಸ್ಥಿರತೆ ಇರುತ್ತೆ. ಹಾಗಂತ ಸಿಕ್ಕಾಪಟ್ಟೆ ಖರ್ಚಿನ ಬಾಬತ್ತಿಗೆ ಕೈ ಹಾಕೋದೂ ಬೇಡ.

ಕಟಕ: ಮನಸ್ಸು ಪ್ರವಾಸಕ್ಕೆ ಹಾತೊರೆಯುತ್ತಿರುತ್ತದೆ. ಅನುಕೂಲ ಇದ್ದರೆ ಹೊರಟುಬಿಡಿ. ಇನ್ನು ಮೂರು ವಾರ ಸಿಹಿಯೇ ಹೆಚ್ಚು. ನಿಮ್ಮ ಹವ್ಯಾಸಕ್ಕೆ ನೀರೆರೆಯುವ ಸಮಯ. ಹೊಸ ಪ್ರೀತಿ ಹುಟ್ಟಬಹುದು. ಅವಕಾಶಗಳು ಹೆಚ್ಚಾಗಬಹುದು. ಹೆಚ್ಚು ಆಶಾವಾದಿಗಳಾಗಿರಿ. ಲೈಫು ಚೆನ್ನಾಗಿರುತ್ತೆ.

ಸಿಂಹ: ಹಳೆಯದರ ಮೆಲುಕು, ಹೊಸ ಯೋಚನೆಗಳು ಹುಟ್ಟುವ ಸಮಯ. ರಹಸ್ಯಗಳು, ವಿಸ್ಮಯಗಳು ಹೆಚ್ಚು. ನೆನಪಿನಿಂದ ಮರೆಯಾದದ್ದು ಧುತ್ತನೆ ಕಣ್ಣೆದುರು ಬರಬಹುದು. ನಿಮ್ಮ ಸಾಮರ್ಥ್ಯ ಏನು ಅಂತ ಜಗತ್ತಿಗೆ ತಿಳಿಯುತ್ತೆ. ಬೆಂಬಲ, ಪ್ರೋತ್ಸಾಹ ಹೆಚ್ಚಾಗುತ್ತೆ. ಅಂಜಿಕೆ ಬೇಡ, ಮುನ್ನಡೆಯಿರಿ.

ಕನ್ಯಾ: ಆಧ್ಯಾತ್ಮಿಕ ಒಳನೋಟಗಳು ದಕ್ಕುವ ಕಾಲ. ಸೋಮಾರಿತನಕ್ಕೆ ಖಂಡಿತಾ ಬ್ರೇಕ್ ಬೀಳುತ್ತೆ. ಭಾವನೆಗಳು ಕೆರಳಬಹುದು, ಅದನ್ನು ಶಾಂತವಾಗಿಸುವುದು ನಿಮ್ಮ ಕೈಯಲ್ಲೇ ಇದೆ. ಬೇರೆಯವರು ನಿಮ್ಮನ್ನು ಫೂಲ್ ಮಾಡೋ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಬಗ್ಗೆ ಕಾಳಜಿಯಿಂದಿರಿ.

ತುಲಾ: ಮೆಶಿನ್‌ಗಳು, ಕಂಪ್ಯೂಟರ್ ಖರೀದಿಸಬೇಕು ಅಂದುಕೊಂಡಿದ್ದರೆ ಆ ಪ್ಲ್ಯಾನ್ ಮುಂದೂಡಿ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಖುಷಿ ಜಾಸ್ತಿ. ಲೈಫ್ ಇಂಟೆರೆಸ್ಟಿಂಗ್ ಆಗಿ ಕಾಣಬಹುದು. ಕೆಲಸದ ಹೊರೆ ಹೆಚ್ಚು. ತಾಳ್ಮೆ ಇರಲಿ. ಇನ್ನೊಬ್ಬರನ್ನು ಕಾಯೋದಕ್ಕಿಂತ ನಮ್ಮ ಕೆಲಸ ನಾವೇ ಮಾಡೋದು ಬೆಟರ್

ವೃಶ್ಚಿಕ: ಬದುಕಿನ ಬಗ್ಗೆ ಪ್ರೀತಿ ಹೆಚ್ಚಬಹುದು. ಸಂಬಂಧಗಳು ಹೆಚ್ಚು ತೀವ್ರವಾಗಬಹುದು. ಪ್ರೀತಿ ಫಲ ಕೊಡಬಹುದು. ಕಲಾವಿದರು ಹಾಗೂ ಲೇಖಕರಿಗೆ ಅದ್ಭುತ ಫಲವಿದೆ. ಸಾಹಸ ಚಟುವಟಿಕೆಗಳತ್ತ ಮನಸ್ಸು ಎಳೆಯುತ್ತದೆ. ಪ್ರವಾಸಕ್ಕೆ ಸಕಾಲ. ಸಹೋದ್ಯೋಗಿಗಳ ಸಹಕಾರವಿರುತ್ತೆ.

ಧನುಸ್ಸು: ಕಠಿಣ ಪರಿಶ್ರಮ ಅನಿವಾರ್ಯ. ಆದರೆ ಕೆಲಸದಲ್ಲಿ ಖುಷಿ ಸಿಗುತ್ತೆ. ಉಳಿದುಕೊಂಡಿದ್ದ ಕಾರ್ಯಗಳೆಲ್ಲ ಈ ವಾರ ಪೂರ್ಣವಾಗುತ್ತೆ. ಆರ್ಥಿಕ ಸ್ಥಿರತೆ ಇರುತ್ತದೆ. ಸಾಮರ್ಥ್ಯ, ಅರ್ಹತೆ ಇದ್ದರೂ ದೊಡ್ಡವರ ಗಮನಸೆಳೆಯಲು ವಿಫಲವಾಗಬಹುದು.

ಮಕರ: ನಿಮ್ಮ ಯೋಚನೆಗಳು ಇತರರಿಗೆ ಮನದಟ್ಟಾಗಬಹುದು. ಹಾಗಂತ ಹೆಚ್ಚಿನ ಫಲ ನಿರೀಕ್ಷಿಸುವಂತಿಲ್ಲ. ನಿಮಗಿದು ಪರೀಕ್ಷೆಯ ಕಾಲ. ಪರ್ಫಾಮೆನ್ಸ್ ಹೇಗಿರುತ್ತೆ ಅನ್ನುವುದರ ಮೇಲೆ ಫಲಿತಾಂಶ ನಿಂತಿರುತ್ತದೆ. ಕೆಲಸದ ಬಗ್ಗೆ ಜಾಗ್ರತೆ ಇರಲಿ.

ಕುಂಭ: ನಿಮ್ಮಉದ್ದೇಶ, ಗುರಿ ನಿಚ್ಚಳವಾಗಿರಲಿ. ಅದು ಈಡೇರುವ ವಾತಾವರಣ ನಿರ್ಮಾಣವಾಗುತ್ತೆ. ಹೊಸ ಕಾರ್ಯಕ್ಕೆ ಈಗ ಕೈ ಹಾಕಬೇಡಿ. ಮನೆ, ಮಕ್ಕಳು, ಸಂಬಂಧದ ಬಗ್ಗೆ ಕಾಳಜಿ ಮಾಡಿ. ನಿರ್ಲಕ್ಷಿಸಿದರೆ ಪಾಠ ಕಲಿಯಬೇಕಾಗುತ್ತದೆ. ಭಾನುವಾರ ಶುಭ, ಸೋಮವಾರ ಕೊಂಚ ಕಠಿಣ. ಎಚ್ಚರಿಕೆಯಿಂದಿರಿ.

ಮೀನ: ನಿಮ್ಮ ಶಕ್ತಿ, ಉತ್ಸಾಹ ಎಲ್ಲ ಇನ್ನು ಮೂರು ವಾರ ಹೆಚ್ಚಿರುತ್ತೆ. ನಾಯಕನ ಸ್ಥಾನದಲ್ಲಿ ನಿಲ್ಲುವ ಅವಕಾಶ. ಹೊಸ ಕಾರ್ಯಕ್ಕೆ ಸಕಾಲವಲ್ಲ. ಕಷ್ಟದಿಂದ ಸ್ವಲ್ಪಮಟ್ಟಿಗೆ ಹಣ ಉಳಿತಾಯ. ವಾರಾಂತ್ಯದಲ್ಲಿ ಸರ್ಪೈಸ್ ಇರುತ್ತೆ.

Follow Us:
Download App:
  • android
  • ios