Asianet Suvarna News Asianet Suvarna News

ಊಟಕ್ಕೆ ಮುನ್ನ ಎಲೆಗೆ ಸುತ್ತುಕಟ್ಟುವುದೇಕೆ?

ಊಟಕ್ಕೂ ಮುನ್ನ ಎಲೆ ಸುತ್ತ ನೀರು ಹಾಕು, ಒಂದು ನಾಲ್ಕು ಅನ್ನ ಅಗಳನ್ನು ತೆಗೆದಿಡುತ್ತಾರೆ ಕೆಲವು ಜಾತಿಗಳಲ್ಲಿ. ಅಷ್ಟಕ್ಕೂ ಈ ಸಂಪ್ರದಾಯವನ್ನು ಏಕೆ ಪಾಲಿಸುತ್ತಾರೆ? ಇದರ ಹಿಂದೆ ಏನಿದೆ ವೈಜ್ಞಾನಿಕ ಕಾರಣ?

Significance sprinkling water around banana leaf while having food on floor
Author
Bangalore, First Published Sep 20, 2019, 3:20 PM IST

ಬ್ರಾಹ್ಮಣರು ಊಟಕ್ಕೂ ಮುನ್ನ ಎಲೆಯ ಸುತ್ತ ನೀರು ಹಾಕಿ, ಕೆಲ ಅನ್ನದ ಅಗುಳುಗಳನ್ನು ಹೊರಗೆ ತೆಗೆದಿರಿಸುವುದನ್ನು ನೋಡಿದ್ದೇವೆ. ಇದಕ್ಕೆ ಪರಿಶೇಚನೆ ಅಥವಾ ಧರಿಸುವುದು ಎನ್ನುತ್ತಾರೆ. ಊಟ ಮಾಡುವುದಕ್ಕೂ ಮುನ್ನ ದೇವರನ್ನು ಪ್ರಾರ್ಥಿಸಿ, ನಮಗೆ ಈ ಊಟವನ್ನು ನೀಡಿದ ವಿಶ್ವಕ್ಕೆ ವಂದಿಸಿ, ನಮ್ಮನ್ನು ಬದುಕಲು ಬಿಟ್ಟ ಯಮಧರ್ಮನಿಗೆ ಸಾಂಕೇತಿಕ ಅನ್ನಬಲಿ ಇರಿಸಿ, ನಮ್ಮ ಕಣ್ಣಿಗೆ ಕಾಣುವ ಹಾಗೂ ಕಾಣದ ಎಲ್ಲ ಜೀವಿಗಳಿಗೂ ಅನ್ನ ಸಿಗಲಿ ಎಂದು ಆಶಿಸುವ ಧಾರ್ಮಿಕ ಕ್ರಿಯೆ ಇದು. ಈ ಸಂಪ್ರದಾಯ ಕೆಲವೇ ಜಾತಿಯವರಲ್ಲಿದೆ.

ಬಾಳೆಲೆ ಊಟ ಬಂಗಾರದ ತಟ್ಟೆಗಿಂತ ಬೆಸ್ಟ್; ನಿಜ್ವಾಗ್ಲೂ !

ಊಟದ ಎಲೆಯ ಸುತ್ತ ನೀರು ಸುತ್ತುಗಟ್ಟುವುದಕ್ಕೆ ನಾವು ಅಷ್ಟಾಗಿ ಯೋಚಿಸದ ಇನ್ನೊಂದು ಲೌಕಿಕ ಕಾರಣವೂ ಇದೆ. ಸಾಮಾನ್ಯವಾಗಿ ನೆಲದ ಮೇಲೆ ಹರಿದಾಡುವ ಇರುವೆ ಮುಂತಾದ ಸಣ್ಣಪುಟ್ಟ ಜೀವಿಗಳಿಗೆ ನೀರು ಒಂದು ತಡೆಯಂತೆ ಕೆಲಸ ಮಾಡುತ್ತದೆ. ಎಲೆಯ ಸುತ್ತ ನೀರು ಹಾಕಿದ್ದರೆ ಅವು ಎಲೆಗೆ ಬರುವುದಿಲ್ಲ. ಹಿದ್ಯುತ್ ಇಲ್ಲದಿದ್ದ ಹಿಂದಿನ ಕಾಲದಲ್ಲಿ ಕತ್ತಲೆಯಲ್ಲಿ ಊಟ ಮಾಡುವಾಗ ಸಣ್ಣಪುಟ್ಟ ಕ್ರಿಮಿಗಳು ಎಲೆಗೆ ಹರಿದುಬಂದರೆ ಕಾಣಿಸುತ್ತಿರಲಿಲ್ಲ. ನೀರು ಹಾಕಿದ್ದರೆ ಅವು ವಾಪಸ್ ಹೋಗುತ್ತಿದ್ದವು. ಅಥವಾ ಎಲೆಯ ಹೊರಗೆ ತೆಗೆದಿರಿಸಿದ ನಾಲ್ಕೈದು ಅಗುಳುಗಳತ್ತ ಆಕರ್ಷಿತವಾಗಿ ಅಲ್ಲಿಗೆ ಹೋಗುತ್ತಿದ್ದವು.

ಬಾಳೆಹಣ್ಣು ಬೆಳೆದು ವರ್ಷಕ್ಕೆ 48 ಲಕ್ಷ ಗಳಿಸುತ್ತಾರೆ ಈ ಕೃಷಿಕ

ಟೇಬಲ್ ಮೇಲೆ ಊಟ ಮಾಡುವವರು ಹೀಗೆ ಮಾಡುವ ಅಗತ್ಯವಿಲ್ಲ. ಆದರೂ ಕೆಲವರು ಸಂಪ್ರದಾಯವನ್ನು ಪಾಲಿಸುವುದಕ್ಕೋಸ್ಕರ ಅಲ್ಲೂ ತಟ್ಟೆ ಸುತ್ತ ನೀರು ಹಾಕುವುದುಂಟು. ಆದರೆ, ಶಾಸ್ತ್ರೋಕ್ತವಾಗಿ ಪರಿಶೇಚನೆ ಮಾಡುವವರು ಟೇಬಲ್ ಮುಂದೆ ಊಟಕ್ಕೆ ಕುಳಿತರೆ ಅದನ್ನು ಮಾಡುವುದಿಲ್ಲ. ಏಕೆಂದರೆ, ಪರಿಶೇಚನೆಯನ್ನು ನೆಲದ ಮೇಲೇ ಮಾಡಬೇಕು.

ಮಹಾಬಲ ಸೀತಾಳಬಾವಿ

Follow Us:
Download App:
  • android
  • ios