Asianet Suvarna News Asianet Suvarna News

ಹೊರನಾಡು ಅನ್ನಪೂರ್ಣೇಶ್ವರಿಗೆ ಶರಣೋ ಶರಣು!

ಮಲೆನಾಡಿನ ಹಸಿರು ಸಿರಿಗಳ ನಡುವೆ ಸ್ಥಾಪಿತವಾದ ಅನ್ನದಾತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಏನು ಈ ದೇವಿಯ ಮಹಿಮೆ?

significance of horanadu annapoorneshwari temple
Author
Bengaluru, First Published Nov 16, 2018, 2:28 PM IST

ಯಾವುದೇ ಸಮಯದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿದರೂ, ಊಟ ದೊರೆಯುವಂತೆ ಮಾಡುವುದು ಈ ಅನ್ನಪೂರ್ಣೇಶ್ವರಿಯ ಮಹಿಮೆ. ಒಮ್ಮೆ ಪಾರ್ವತಿ ಪರಮಶಿವನೊಂದಿಗೆ ಪಗಡೆ ಆಡುವಾಗ ಇಬ್ಬರ ನಡುವೆ ಜಗಳವಾಯಿತಂತೆ. ಆಗ ಸಿಟ್ಟಲ್ಲಿ ಶಿವ ಭೂಮಿ ಮೇಲೆ ಎಲ್ಲವೂ ಮಾಯವಾಗಬೇಕೆನ್ನುತ್ತಾನೆ. ಆದರೆ, ಅನ್ನ ಎಲ್ಲರಿಗೂ ಸಿಗಬೇಕೆಂದ ಪಾರ್ವತಿ, ಈ ಹೊರನಾಡಿನಲ್ಲಿ ಬಂದು ನೆಲೆಸುತ್ತಾಳೆ. ಎಂದಿಗೂ ಅನ್ನ ಅಕ್ಷಯವಾಗುವಂತೆ ನೋಡಿಕೊಳ್ಳುವುದು ಅನ್ನಪೂರ್ಣೇಶ್ವರ ಅವತಾರವಾದ ಪಾರ್ವತಿ ವಿಶೇಷ.

  • ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನಲ್ಲಿ ಬಂದು ನೆಲೆಸಿದ ಅನ್ನಪೂರ್ಣೇಶ್ವರಿ ಯಾವತ್ತೂ ಹಸಿದು ಬಂದವರನ್ನು ಹಾಗೇ ಕಳುಹಿಸಿದ್ದೇ ಇಲ್ಲ. 
  • ಬ್ರಹ್ಮನ ತಲೆಯನ್ನು ಶಿವನ್ನೊಮ್ಮೆ ಕಡಿಯುತ್ತಾನೆ. ಬ್ರಹ್ಮನ ಬುರುಡೆ ಶಿವನ ಕೈಗೆ ಅಂಟಿದ್ದು ಬಿಡುವುದಿಲ್ಲ. ಅದು ತುಂಬುವಷ್ಟು ದವಸ ಧಾನ್ಯಗಳನ್ನು ತುಂಬ ಬೇಕಿತ್ತು. ಅದೂ ಎಲ್ಲಿಯೂ ಸಾಧ್ಯವಾಗದಿದ್ದಾಗ, ಅನ್ನಪೂರ್ಣೇಶ್ವರಿ ಎದುರು ತಲೆ ಬಾಗುತ್ತಾನೆ ಶಿವ. ಆಗ ಬುರುಡೆ ತುಂಬಿ, ಶಿವನ ಕೈಯಿಂದ ಬುರುಡೆ ಕೆಳಗೆ ಬೀಳುತ್ತದೆ ಎಂಬ ಪುರಾಣ ಕಥೆಯೊಂದಿದೆ.
  • ಅಕ್ಷಯ ತೃತೀಯದಂದು 1973ರಲ್ಲಿ ಈ ದೇವಸ್ಥಾನದ ಮರು ಪ್ರತಿಷ್ಠಾಪನೆಯಾಗಿದೆ. ಅದಕ್ಕೂ ಮುಂಚೆ 400 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವು ಚಿಕ್ಕ ಗುಡಿಯಾಗಿತ್ತು. ವಾಸ್ತು ಪ್ರಕಾರ ಈ ದೇವಸ್ಥಾವನ್ನು ಜೀರ್ಣೋದ್ಧಾರ ಮಾಡಿದ್ದು ವೆಂಕಟಸುಬ್ಬ ಜೋಶಿಯವರು.
  • ಕುಳಿತ ಸ್ಥಿತಿಯಲ್ಲಿ ದೇವಿ ಆಶೀರ್ವದಿಸುತ್ತಿರುವುದು ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿದ್ದರೆ, ಇಲ್ಲಿ ನಿಂತು ಕೊಂಡ ದೇವಿಯನ್ನು ಕಾಣಬಹುದು. 
  • ಅಡಿಯಿಂದ ಮುಡೀಯವರೆಗೂ ಈ ದೇವಿಯನ್ನು ಚಿನ್ನದಲ್ಲಿಯೇ ಮುಚ್ಚಿರುತ್ತಾರೆ.
  • ಅಕ್ಷಯ ತೃತೀಯವನ್ನು ಅನ್ನಪೂರ್ಣೆ ಜನ್ಮದಿನವೆನ್ನಲಾಗುತ್ತದೆ. 
  • ಸಾಮಾನ್ಯವಾಗಿ ಫೆಬ್ರವರಿಯಲ್ಲಿ 5 ದಿನಗಳ ಕಾಲ ಈ ದೇವಿಯ ರಥೋತ್ಸವ ನಡೆಯುತ್ತದೆ.
  • ನವರಾತ್ರಿಯಲ್ಲಿ ಅದ್ಧೂರಿ ಪೂಜೆ ನೆರವೇರುತ್ತದೆ.  

ಮಹಾ ಮಂಗಳಾರತಿ ನಡೆಯೋ ಸಮಯ:

ದಿನದಲ್ಲಿ ಮೂರು ಬಾರಿ ಮಹಾ ಮಂಗಳಾರತಿ ನಡೆಯುತ್ತದೆ - 9.00 AM, 2.00 PM ಹಾಗೂ  9.00 PM. 

ದೇವಾಲಯದ ಸಮಯ: 

ದರ್ಶನ ವೇಳೆ...

ಬೆಳಗ್ಗೆ - 6.30am - 9.00am

ಮಧ್ಯಾಹ್ನ - 11.00am - 2.00pm

ರಾತ್ರಿ - 7.00pm - 9.30pm 

Follow Us:
Download App:
  • android
  • ios