ಇಂದು ಈ ರಾಶಿಯವರಿಗೆ ದೊಡ್ಡ ಯಶಸ್ಸು ಸಿಗಲಿದೆ
ಅಕ್ಟೋಬರ್ 23 ಬುಧವಾರ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ನಿಮ್ಮ ಭವಿಷ್ಯ ?
ಮೇಷ: ನೊಂದವರಿಗೆ ದನಿಯಾಗಿ ನಿಲ್ಲಲಿದ್ದೀರಿ. ಯಾವುದಕ್ಕೂ ಅಂಜದೇ ಮುಂದೆ ಸಾಗುತ್ತಿರಿ. ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದೀರಿ.ನಿಮ್ಮಿಂದ
ವೃಷಭ: ಮತ್ತೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಒಳ್ಳೆಯ ಗುಣಕ್ಕೆ ಬೆಲೆ ಇದ್ದೇ ಇರುತ್ತದೆ. ನೆಮ್ಮದಿಯಾಗಿ ಇರಲಿದ್ದೀರಿ.
ಮಿಥುನ: ವ್ಯವಹಾರದಲ್ಲಿ ಲಾಭ ಸಿಗಲಿದೆ. ಎಲ್ಲವೂ ನೀವು ಅಂದುಕೊಂಡಂತೆಯೇ ನಡೆಯಲಿದ್ದು, ಮನೆಯಲ್ಲಿ ಸಂತಸ ನೆಲೆಗೊಳ್ಳಲಿದೆ.
ಒಂದು ರಾಶಿಗೆ ಒಳ್ಳೆಯ ಫಲವೊಂದು ಒಲಿಯಲಿದೆ : ವಾರ ಭವಿಷ್ಯ
ಕಟಕ: ಹೊಸ ವಸ್ತುಗಳನ್ನು ಕೊಂಡುಕೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರ ಕಷ್ಟಗಳಿಗೆ ನೀವು ಕಣ್ಣೀರು ಹಾಕುವುದರಲ್ಲಿ ಅರ್ಥವಿಲ್ಲ.
ಸಿಂಹ: ಗುಟ್ಟುಗಳನ್ನು ಕಾಪಾಡಿಕೊಳ್ಳಿ. ಸಂಸಾರದಲ್ಲಿ ಸಣ್ಣ ಪುಟ್ಟ ಗೊಂದಲ ಸಹಜ. ಎಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಹೋಗಿ.
ಕನ್ಯಾ: ಕೋಪ ಅತಿಯಾದರೆ ಅದರಿಂದ ಅನಾಹುತವೇ ಹೆಚ್ಚು. ಗಡಿಬಿಡಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ. ತಾಳ್ಮೆ ಇರಲಿ.
ತುಲಾ: ಅತಿ ಅವಸರ ಬೇಡ. ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ. ನಿಮಗೆ ಗೊತ್ತಿಲ್ಲದೇ ಇದ್ದ ವಿಚಾರಗಳು ಇಂದು ತಿಳಿಯಲಿವೆ.
ವೃಶ್ಚಿಕ: ಹೊಸ ಸ್ನೇಹ ಬೆಳೆಯಲಿದೆ. ಹಳೆ ಸ್ನೇಹಕ್ಕೂ ಬೆಲೆ ಕೊಡುವುದನ್ನು ಮರೆಯಬೇಡಿ. ಹಣಕಾಸಿನ ವಿಚಾರದಲ್ಲಿ ಹಿಡಿತ ಸಾಧಿಸಿ.
ಧನಸ್ಸು: ವ್ಯಕ್ತಿಗಳೊಂದಿಗೆ ಸ್ನೇಹ ಮಾಡುವಾಗ ಸರಿಯಾಗಿ ಅಳೆದು ತೂಗಿ ನಿರ್ಧಾರ ಮಾಡಿ. ಇಡೀ ದಿನ ಕೆಲಸದಲ್ಲಿ ನಿರತರಾಗಲಿದ್ದೀರಿ.
ಮಕರ: ಸೂಕ್ತ ಸಂದರ್ಭ ನೋಡಿಕೊಂಡು ಒಳ್ಳೆಯ ಕಾರ್ಯ ಮಾಡಲು ಮುಂದಾಗಿ. ನಿಮ್ಮ ಗೆಲುವು ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ.
ಕುಂಭ: ಮತ್ತ್ಯಾರದ್ದೋ ಕೈಗೊಂಬೆ ರೀತಿ ವರ್ತಿಸಬೇಕಾದ ಸಂದರ್ಭ ಬರಲಿದೆ. ಸತ್ಯವಾದ ದಾರಿಯಲ್ಲಿ ನಿಮ್ಮ ನಡೆ ಇರಲಿ.
ಮೀನ: ನಿಮ್ಮ ಗುಣಕ್ಕೆ ಹೊಂದುವಂತಹ ಕೆಲಸವೇ ಇಂದು ದೊರೆಯಲಿದೆ. ಸಹಾಯ ಮಾಡಿದವ ಮೀನ ರಿಗೆ ಕೃತಜ್ಞತೆಯಿಂದ ನಡೆದುಕೊಳ್ಳಿ.