Asianet Suvarna News Asianet Suvarna News

ಇಂದು ಈ ರಾಶಿಯವರು ಶುಭ ಸುದ್ದಿ ಕೇಳಲಿದ್ದೀರಿ

ನವೆಂಬರ್ 6 ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ? 

Daily Bhavishya 06 November 2019
Author
Bengaluru, First Published Nov 6, 2019, 7:01 AM IST

ಮೇಷ: ದಿನದ ಪ್ರಾರಂಭದಲ್ಲಿಯೇ ಶುಭ ಸುದ್ದಿ ಕೇಳಲಿದ್ದೀರಿ. ಗುರು ಬಲ ಚೆನ್ನಾಗಿರಲಿದೆ. ನೀವು ನಂಬಿದ ಸತ್ಯ ನಿಮ್ಮನ್ನು ಕಾಯಲಿದೆ.

ವೃಷಭ: ಹಠಯೋಗಿಯಂತೆ ಹಿಡಿದ ಕಾರ್ಯವನ್ನು ಸಂಪೂರ್ಣವಾಗಿ ಪೂರೈಸಲಿದ್ದೀರಿ. ಹೊಸ ವಸ್ತುಗಳನ್ನು ಕೊಳ್ಳುವ ಸಾಧ್ಯತೆಗಳಿವೆ.

ಮಿಥುನ: ನಿಮ್ಮ ಬಳಿ ಇರುವ ವಸ್ತುಗಳನ್ನು ಮತ್ತೊಬ್ಬರಿಗೆ ದಾನ ಮಾಡಲಿದ್ದೀರಿ. ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಉತ್ತಮ. ಶುಭಫಲ.

ಕಟಕ: ಗಂಭೀರ ವಿಚಾರಗಳ ಬಗ್ಗೆ ಮಾತನಾಡುವಾಗ ಸೂಕ್ತ ಎಚ್ಚರಿಕೆ ಇರಲಿ. ಇನ್ನೊಬ್ಬರ ವಿಚಾರಗಳಲ್ಲಿ ಅನಗತ್ಯವಾಗಿ ಭಾಗಿಯಾಗದಿರಿ.

ಸಿಂಹ: ಕೋರ್ಟ್ ವ್ಯಾಜ್ಯಗಳು ನಿಮ್ಮ ಪರವಾಗಿ ಇತ್ಯರ್ಥವಾಗಲಿವೆ. ಜವಾಬ್ದಾರಿ ಹೆಚ್ಚಾಗಲಿದೆ. ನೆಮ್ಮದಿಯ ನಾಳೆಗೆ ಇಂದಿನಿಂದಲೇ ತಯಾರಿ.

ಕನ್ಯಾ: ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕವಾಗಿ ಇರುವುದು ಒಳಿತು. ನೀವು ಮಾಡುವ ಕಾಯಕ ನಿಮ್ಮ ವ್ಯಕ್ತಿತ್ವ ಹೆಚ್ಚಿಸಲಿದೆ.

ತುಲಾ: ಪರರ ಸ್ವತ್ತಿಗೆ ಆಸೆಪಡುವುದು ಬೇಡ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಜಾಣತನದಿಂದ ಬಂದ ಸಂದರ್ಭಗಳನ್ನು ಎದುರಿಸಿ.

ವೃಶ್ಚಿಕ: ಹತ್ತು ರುಪಾಯಿ ಸಂಪಾದನೆಯಾದರೆ ಅದರಲ್ಲಿ ಎಂಟು ರುಪಾಯಿ ವ್ಯಯ ವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಒಂದು ರಾಶಿಗೆ ಉದ್ಯೋಗದಲ್ಲಿ ಭಾರೀ ಲಾಭ : ವಾರ ಭವಿಷ್ಯ

ಧನಸ್ಸು: ಮಕ್ಕಳ ವಿಚಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದೀರಿ. ಮನೆಯಲ್ಲಿ ನೆಮ್ಮದಿ ನೆಲೆಯಾಗಲಿದೆ. ಸಂತೋಷ ಹೆಚ್ಚಾಗಲಿದೆ.

ಮಕರ: ಸ್ವಾಮಿ ಕಾರ್ಯ ಸ್ವಕಾರ್ಯ ಎನ್ನುವಂತೆ ಮಾಡಿ. ದೀರ್ಘ ಕಾಲದ ಉಳಿತಾಯಕ್ಕೆ ಮುಂದಾಗುವಿರಿ. ಕೆಲಸದಲ್ಲಿ ಶ್ರದ್ಧೆ ಇರಲಿ.

ಕುಂಭ: ಮುಂದೆ ಬರುವ ಸಂದಿಗ್ಧಗಳನ್ನು ಇಂದೇ ಊಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಮೀನ: ನಿರಂತರ ಪ್ರಯತ್ನದಿಂದ ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ಭೂ ವ್ಯವಹಾರಗಳಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸಿ. ತಾಳ್ಮೆ ಇರಲಿ.
 

 

Follow Us:
Download App:
  • android
  • ios